ಬೆಳಗಾವಿ, ಡಿ.19 (DaijiworldNews/HR): ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿದವರ ವಿರುದ್ಧ ಪೀರನವಾಡಿಯಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ನಿಷೇಧಾಜ್ಞೆಯ ನಡುವೆಯೂ ಪ್ರತಿಭಟನೆ ನಡೆಸುತ್ತಿದ್ದಂತ ಕರವೇ ಕಾರ್ಯಕರ್ತರನ್ನು ತೆಡೆಯಲು ಬಂದ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಂಇಎಸ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಬೆಳಗಾವಿಯ ಪೀರನವಾಡಿಯಲ್ಲಿ ಕನ್ನಡ ಧ್ವಜಹಿಡಿದು ಕರವೇ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ನಿಷೇಧಾಜ್ಞೆಯ ನಡುವೆಯು ಪ್ರತಿಭಟನೆ ನಡೆಸುತ್ತಿರೋ ಕರವೇ ಕಾರ್ಯಕರ್ತರನ್ನು ತಡೆಯೋದಕ್ಕೆ ಬಂದಂತ ಪೊಲೀಸರೊಂದಿಗೆ ವಾಗ್ವಾದವೇ ನಡೆದಿದೆ.
ಸಂಗೊಳ್ಳಿ ರಾಯಣ್ಮ ಪ್ರತಿಮೆ ವಿರೂಪಗೊಳಿಸಿದವರನ್ನು ಬಂಧಿಸುವಂತೆ ಘೋಷಣೆ ಕೂಗಿದ ಕರವೇ ಕಾರ್ಯಕರ್ತರನ್ನು ಪೊಲೀಸರು, ವಶಕ್ಕೆ ಪಡೆದುಕೊಂಡಿದ್ದಾರೆ.