ಮುಂಬೈ, ಡಿ.19 (DaijiworldNews/HR): ಶಿವಸೇನೆ ಕಾನೂನು ಕೈಗೆತ್ತಿಕೊಂಡರೆ ಅದಕ್ಕೆ ಕರ್ನಾಟಕ ಸರ್ಕಾರವೇ ನೇರ ಹೊಣೆಯಾಗಲಿದ್ದು, ನಮ್ಮ ಕಾರ್ಯಕರ್ತರು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ಏಕನಾಥ ಶಿಂಧೆ ತಿಳಿಸಿದ್ದಾರೆ.
ಬೆಳಗಾವಿ ಹಿಂಸಾಚಾರ ಪ್ರಕರಣದ ಬೆನ್ನಲ್ಲೇ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಎಂಇಎಸ್ ನಶಿಸಿ ಹೋಗುವ ಕಾಲ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಇನ್ನು ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಏಕನಾಥ್ ಶಿಂಧೆ, ಒಂದು ವೇಳೆ ಕಾನೂನು ಕ್ರಮಕ್ಕೆ ಮುಂದಾದರೆ ಕರ್ನಾಟಕ ಸರ್ಕಾರವೇ ಇರುವುದಿಲ್ಲ. ಶಿವಸೇನೆ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದ್ದಾರೆ.