ಅಮೇಠಿ, ಡಿ.18 (DaijiworldNews/HR): ಭಾರತದಲ್ಲಿ ಹೆಚ್ಚುತ್ತಿರುವ ನೋವು, ಹಣದುಬ್ಬರ ಹಾಗೂ ಸಂಕಷ್ಟಗಳಿಗೆ 'ಹಿಂದುತ್ವವಾದಿಗಳೇ' ನೇರ ಹೊಣೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಇದು ಹಿಂದುಗಳು ಮತ್ತು ಹಿಂದುತ್ವವಾದಿಗಳ ನಡುವಿನ ಯುದ್ಧವಾದ್ದು, ಹಿಂದುಗಳು ಸತ್ಯಾಗ್ರಹವನ್ನು ನಂಬಿದರೆ, ಹಿಂದುತ್ವವಾದಿಗಳು ಸತ್ತಾಗ್ರಹವನ್ನು (ರಾಜಕೀಯ ದುರಾಸೆ) ನಂಬುತ್ತಾರೆ ಎಂದರು.
ಇನ್ನು ಹಿಂದುವಾದವನು ಸತ್ಯದ ಮಾರ್ಗವನ್ನು ಅನುಸರಿಸುತ್ತಾನೆ. ತನ್ನೊಳಗಿನ ಭಯವನ್ನು ಎಂದಿಗೂ ಹಿಂಸೆ, ದ್ವೇಷ ಮತ್ತು ಕೋಪವಾಗಿ ಪರಿವರ್ತನೆಗೊಳ್ಳಲು ಬಿಡುವುದಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಮಹಾತ್ಮಾ ಗಾಂಧಿ. ಅವರು ಸತ್ಯವನ್ನು ಅರ್ಥಮಾಡಿಕೊಳ್ಳಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದಿದ್ದಾರೆ.
"ಹಿಂದುತ್ವವಾದಿಯೊಬ್ಬ ಗಂಗಾ ನದಿಯಲ್ಲಿ ಏಕಾಂಗಿಯಾಗಿ ಸ್ನಾನ ಮಾಡಿದರೆ, ಒಬ್ಬ ಹಿಂದು ಕೋಟ್ಯಂತರ ಜನರೊಂದಿಗೆ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾನೆ" ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.