ಶಹಜಾನ್ಪುರ, ಡಿ.18 (Daijiworld/PY): ಉತ್ತರ ಪ್ರದೇಶ ರಾಜ್ಯದ ಶಹಜಹಾರ್ಪುರ ಜಿಲ್ಲೆಯಯಲ್ಲಿ 594 ಕಿ.ಮೀ. ಉದ್ದದ 36,230 ಕೋಟಿ ರೂ. ವೆಚ್ಚದ ಗಂಗಾ ಎಕ್ಸ್ಪ್ರೆಸ್ವೇಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, "ಗಂಗಾ ಎಕ್ಸ್ಪ್ರೆಸ್ ಹೈವೇ ಉತ್ತರಪ್ರದೇಶದ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಇದು ಯುವಕರಿಗೆ ಉದ್ಯೋಗ ಪಡೆಯಲು ಸಹಕಾರಿಯಾಗಿದೆ. ನಾನು ಶಹಜಹಾನ್ಪುರ್, ಬುಲಂದ್ಶಹರ್, ಬದೌನ್, ರಾಯ್ಬರೇಲಿ, ಮೀರತ್, ಉನ್ನಾವೋ, ಹಾಪುರ್, ಪ್ರಯಾಗ್ರಾಜ್, ಅಮ್ರೋಹಾ, ಪ್ರತಾಪ್ಗಢ್ ಹಾಗೂ ಹರ್ದೋಯಿನಲ್ಲಿರುವ ಪ್ರತಿಯೋರ್ವರನ್ನು ಅಭಿನಂದಿಸುತ್ತೇನೆ" ಎಂದಿದ್ದಾರೆ.
ಉತ್ತರಪ್ರದೇಶದ ಪಶ್ಚಿಮ ಹಾಗೂ ಪೂರ್ವ ಭಾಗವನ್ನು ಸಂಪರ್ಕಿಸುವ ಗಂಗಾ ಎಕ್ಸ್ಪ್ರೆಸ್ ವೇ, ಹರಿಯಾಣ, ದೆಹಲಿ ಹಾಗೂ ಬಿಹಾರಕ್ಕೆ ಉತ್ತರಪ್ರದೇಶವನ್ನು ಮತ್ತಷ್ಟು ಸಮೀಪ ಮಾಡಲಿದೆ. ಈ ಯೋಜನೆಗೆ ಯೋಗಿ ಆದಿತ್ಯನಾಥ್ ಸರ್ಕಾರ 2020ರ ನವೆಂಬರ್ 26ರಂದು ಅನುಮೋದನೆ ನೀಡಿತ್ತು. ಈ ಯೋಜನೆಯು ಸುಮಾರು 36,000 ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿದೆ.