ಲಖನೌ, ಡಿ.18 (Daijiworld/PY): "ಬಿಜೆಪಿಗೆ ಚುನಾವಣೆ ಸೋಲಿನ ಭೀತಿ ಎದುರಾಗಿದೆ. ಈ ಕಾರಣಕ್ಕಾಗಿ ಸಮಾಜವಾದಿ ಪಕ್ಷದ ನಾಯಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುತ್ತಿದೆ" ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ಧಾರೆ.
ರಾಯ್ಬರೇಲಿಯಲ್ಲಿ ಮಾತನಾಡಿದ ಅವರು, "ಆದಾಯ ತೆರಿಗೆ ಇಲಾಖೆಯಿಂದ ದಾಳಿ ಮಾಡಿಸುತ್ತಿದ್ಧಾರೆ. ಇದಕ್ಕೂ ಮೊದಲು ಏಕೆ ಅವರು ದಾಳಿ ಮಾಡಿಸಿಲ್ಲ? ಚುನಾವಣೆ ಸಮೀಪಿಸಿದಾಗಲೇ ಈ ದಾಳಿ ಏಕೆ? ಬಿಜೆಪಿಗೆ ಚುನಾವಣೆಯಲ್ಲಿ ಸೋಲಾಗಲಿದೆ" ಎಂದಿದ್ದಾರೆ.
ಉತ್ತರ ಪ್ರದೇಶದ ಹಲವೆಡೆ ಅಖಿಲೇಶ್ ಅವರ ಕೆಲವು ಆಪ್ತ ನಾಯಕರ ಮನೆಗಳ ಮೇಲೆ ಶನಿವಾರ ಐಟಿ ದಾಳಿ ನಡೆಸಿದೆ.
ಸಮಾಜವಾದಿ ಪಕ್ಷದ ವಕ್ತಾರ ರಾಜೀವ್ ರೈ, ಅಖಿಲೇಶ್ ಅವರ ವೈಯುಕ್ತಿಕ ಕಾರ್ಯದರ್ಶಿ ಜೈನೇಂದ್ರ ಯಾದವ್ ಹಾಗೂ ಮತ್ತೊಬ್ಬ ನಾಯಕ ಮನೋಜ್ ಯಾದವ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.