ಮುಂಬೈ, ಡಿ 18 (DaijiworldNews/MS): ರಾಖಿ ಸಾವಂತ್ ಬಿಗ್ ಬಾಸ್ 15ರ ಮನೆಯಲ್ಲಿ ತನ್ನ ಪತಿ ರಿತೇಶ್ ಎಂದು ಪರಿಚಯಿಸಿ ಬಿಗ್ ಬಾಸ್ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ರಾಖಿ - ರಿತೇಶ್ ದಂಪತಿಗಳು ಎಂದು ಪೋಸು ನೀಡುತ್ತಿರುವ ಬಿಗ್ ಬಾಸ್ ಮನೆಯೊಳಗಿನ ಕ್ಯಾಮೆರಾ ಮುಂದೆಯೇ ರೊಮ್ಯಾನ್ಸ್ ಮಾಡಿದ್ದೂ, ಜಗಳವಾಡಿದ್ದೂ ಇದೆ..ಈ ವಾರದ ಸಂಚಿಕೆಯಲ್ಲಿ "ರಾಖಿ ಯಿಂದ ನೀನು" ಎಂದು ರಿತೇಶ್ ಗೆ ಸಲ್ಮಾನ್ ಖಾನ್ ವಾರ್ನಿಂಗ್ ಕೊಡುವುದು ನೋಡಬಹುದಾಗಿದೆ.
ರಾಖಿ ಸಾವಂತ್ ಮದುವೆಯೇ ಆಗಿಲ್ಲ, ಮದುವೆ ಆಗಿದೆ ಎಂಬ ಸುದ್ದಿ ಸುಳ್ಳು ಎನ್ನುತ್ತಿರುವಾಗಲೇ ಬಿಗ್ ಬಾಸ್ ಮನೆಯಲ್ಲಿ ಜಗತ್ತಿನ ಮುಂದೆ ಪತಿ ಎಂದು ಬೆಲ್ಜಿಯಂನ ಎನ್ಆರ್ಐ ರಿತೇಶ್ ಎಂಬ ವ್ಯಕ್ತಿಯನ್ನು ಪರಿಚಯಿಸಿದ್ದರು. ನನ್ನ ಗಂಡ ಒಳ್ಳೆಯವರು, ನನಗೋಸ್ಕರ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದರು.
ಆದರೆ ಈ ಕಹಾನಿ ಈಗ ಟ್ವಿಸ್ಟ್ ಪಡೆದಿದ್ದು, ರಿತೇಶ್ ನ ನೈಜ ಪತ್ನಿ ಸ್ನಿಗ್ಧಾ ಪ್ರಿಯಾ ಎಂದು ತಿಳಿದುಬಂದಿದ್ದು ಆಕೆ ಈ ಹಿಂದೆಯೇ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಬಿಗ್ ಬಾಸ್ 15 ರಲ್ಲಿ ನೀವು ನೋಡುತ್ತಿರುವ ರಿತೇಶ್ ನನ್ನ ಪತಿ ರಿತೇಶ್ ಕುಮಾರ್. ನಾವಿಬ್ಬರೂ ಬಿಹಾರದವರಾಗಿದ್ದೇವೆ. ಡಿಸೆಂಬರ್ 1, 2014 ರಂದು ನಮ್ಮಿಬ್ಬರ ಅರೇಂಜ್ಡ್ ಮ್ಯಾರೇಜ್ ನಡೆದಿತ್ತು .ಆರಂಭದಲ್ಲಿ, ನಾವು ಅವರ ಹುಟ್ಟೂರಾದ ಬೆಟ್ಟಿಯಾ (ಬಿಹಾರ) ನಲ್ಲಿ ವಾಸಿಸುತ್ತಿದ್ದೆವು ಬಳಿಕ ಮಾರ್ಚ್ 2015 ರಲ್ಲಿ ನಾವು ಚೆನ್ನೈಗೆ ಸ್ಥಳಾಂತರವಾದೆವು. ಅದೇ ವರ್ಷ ಡಿಸೆಂಬರ್ನಲ್ಲಿ ನಮಗೆ ಮಗುವಾಯಿತು. ವಿವಾಹದ ಏಳು ವರ್ಷಗಳಲ್ಲಿ, ನಾನು ಅವನೊಂದಿಗೆ ಕಳೆದಿರುವುದು ಕೇವಲ ಎರಡೂವರೆ ವರ್ಷ. ಅದು ಕೂಡಾ ಅಗ್ನಿಪರೀಕ್ಷೆಗಿಂತ ಕಡಿಮೆಯಾಗಿರಲಿಲ್ಲ ಎಂದು ವಿವರಿಸಿದ್ದಾರೆ.
ಸ್ನಿಗ್ಧಾ ಹೇಳುವಂತೆ ರಿತೇಶ್ ಶಾರ್ಟ್ ಟೆಂಪರ್ ವ್ಯಕ್ತಿಯಾಗಿದ್ದು ಸಾಕಷ್ಟು ಆಕೆಗೆ ಸಾಕಷ್ಟು ದೈಹಿಕ ಹಿಂಸೆ ನೀಡುತ್ತಿದ್ದರು . 2017ರ ಫೆಬ್ರವರಿ 18ರಂದು ಆತನ ತಾಯಿ (ಮಧುಬಾಲಾ ದೇವಿ) ಮತ್ತು ಸಹೋದರಿ (ವಂದನಾ ಸಿಂಗ್)ದಂಪತಿಗಳನ್ನು ಭೇಟಿ ಮಾಡಲು ಬಂದಾಗ ರಿತೇಶ್ ಬೆಲ್ಟ್ ನಲ್ಲಿ ನಾಲ್ಕು ಗಂಟೆಗಳ ಕಾಲ ಹೊಡೆದಿದ್ದ. ಕೊನೆಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಆಕೆ ಹೆತ್ತವರ ಮನೆಗೆ ಮರಳಿದ್ದು ಬಿಹಾರದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರಿತೇಶ್, ಆತನ ತಾಯಿ ಮತ್ತು ಸಹೋದರಿಯ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಹಲ್ಲೆಯ ದೂರು ದಾಖಲಿಸಿದ್ದರು
" ಈ ಘಟನೆ ಎಂಟು ತಿಂಗಳ ನಂತರ ರಿತೇಶ್ ಕರೆದೊಯ್ಯಲು ಬಂದಿದ್ದು ಮಗು ತಂದೆಯ ಪ್ರೀತಿ ವಂಚಿತನಾಗುತ್ತಾನೆಂದು ಹಾಗೂ ಆತ ನನ್ನ ಮೇಲೆ ಕೈ ಎತ್ತುವುದಿಲ್ಲ ಎಂದು ನನ್ನ ತಂದೆಗೆ ಭರವಸೆ ನೀಡಿದ ಬಳಿಕ ಆತನೊಂದಿಗೆ ಹಿಂತಿರುಗಿದ್ದೆ. ಆದರೆ ೨ ತಿಂಗಳ ಬಳಿಕ ನಂಬಿಕೆಗಳು ತಲೆಕೆಳಗಾಯಿತು. ಅಕ್ಟೋಬರ್ 2018 ತೊರೆದು ನಮ್ಮನ್ನು ಹೋದ ಆತ ಹಿಂತಿರುಗಿದ್ದು ಜೂನ್ 2019 ರಲ್ಲಿ ನಮ್ಮೊಂದಿಗೆ ಹತ್ತು ದಿನಗಳ ಕಾಲ ಇದ್ದು ಮತ್ತೆ ಹಿಂತಿರುಗಲಿಲ್ಲ..ನನ್ನ ನಂಬರ್ ಬ್ಲಾಕ್ ಮಾಡಿ ಸಂಪರ್ಕಕ್ಕೂ ಸಿಗದೆ ದೂರವಾದ . ಮಗನ ಸಲುವಾಗಿ ನಾನು ಅವನಿಗೆ ಇಮೇಲ್ ಕಳುಹಿಸಿದೆ. ಈ ವೇಳೆ ರಿತೇಶ್ ಸಂಪರ್ಕಿಸಿ ವಿಚ್ಛೇದನವನ್ನು ಕೇಳಿದರು, ನಾನು ಅದನ್ನು ನಿರಾಕರಿಸಿದೆ. ಮೂರು ತಿಂಗಳ ಹಿಂದೆ ನನ್ನ ಸಂಪರ್ಕಕ್ಕೆ ಬಂದಿದ್ದು ಆತ ಮತ್ತೆ ವಿಚ್ಛೇದನ ಕೇಳಿದ್ದಾನೆ" ಎಂದು ಸ್ನಿಗ್ದಾ ವಿವರಿಸಿದ್ದಾರೆ
" ರಾಖಿ ಸಾವಂತ್ ಅವರ ಪತಿಯಾಗಿ ರಿತೇಶ್ ಅವರು ಬಿಗ್ ಬಾಸ್ ಗೆ ಪ್ರವೇಶಿಸಿದ್ದಾರೆ ಎಂಬ ಸುದ್ದಿ ಕೇಳಿದಾಗ ನಾನು ಆಘಾತಕ್ಕೊಳಗಾಗಿದ್ದೆ. ರಾಖಿಯಂತಹ ಸೆಲೆಬ್ರಿಟಿಯನ್ನು ಅವರು ಹೇಗೆ ಮದುವೆಯಾಗುತ್ತಾರೆಂದು ನನಗೆ ಇನ್ನೂ ನಂಬಲಾಗುತ್ತಿಲ್ಲ. ನನ್ನ ಪ್ರಕಾರ, ಇದು ಸುಳ್ಳಾಗಿದ್ದು ಆತ ಎನ್ಆರ್ಐ ಅಲ್ಲ, ಆತನ ಮಾಲೀಕತ್ವದಲ್ಲಿ ಯಾವ ಕಂಪನಿಯೂ ಇಲ್ಲ. ಬಿಗ್ ಬಾಸ್ 15 ರಲ್ಲಿ ರಾಖಿ ಸಾವಂತ್ ಅವರ ಪತಿಯಂತೆ ಹೇಗೆ ರಿತೇಶ್ ಪೋಸ್ ನೀಡಬಹುದು? ಆತ ನನ್ನನ್ನು ಮದುವೆಯಾಗಿದ್ದಾನೆ. ಇದು ಕಾನೂನಿಗೆ ವಿರುದ್ಧವಾಗಿದೆ" ಎಂದು ಹೇಳಿದ್ದಾರೆ.