ಬೆಳಗಾವಿ, ಡಿ.18 (DaijiworldNews/HR): ಸರ್ಕಾರದ ವಾಹನಗಳು ಸೇರಿ ಹಲವು ವಾಹನಗಳ ಮೇಲೆ ಬೆಳಗಾವಿಯಲ್ಲಿ ದಾಳಿ ನಡೆಸಿದ್ದು ಕಾನೂನು ಬಾಹಿರವಾಗಿದ್ದು, ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ಡಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿಗೆ ಅಧಿಕಾರಿಗಳು ಅಲ್ಲಿನ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳುತ್ತಾರೆ. ಬಳಿಕ ಅಗತ್ಯ ಬಿದ್ದರೆ ನಂತರ ನಮ್ಮ ಸರ್ಕಾರ ಅಲ್ಲಿನ ಸರ್ಕಾರದ ಜೊತೆ ಮಾತಾಡುತ್ತೇವೆ" ಎಂದರು.
ಇನ್ನು ಇದರಲ್ಲಿ ಪೊಲೀಸರ ವೈಫಲ್ಯ ಏನೂ ಇಲ್ಲ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ದಾಳಿ, ಹಲ್ಲೆ ವಿಚಾರ ಅಲ್ಲಿನ ಸರ್ಕಾರದ ಜವಾಬ್ದಾರಿ. ಎರಡೂ ರಾಜ್ಯಗಳ ಗೃಹ ಕಾರ್ಯದರ್ಶಿಗಳು ಮೊದಲು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ. ಬಳಿಕ ಅವಶ್ಯಕತೆ ಬಿದ್ದರೆ ನಾನು ಮಾತಾಡುತ್ತೇನೆ" ಎಂದು ಹೇಳಿದ್ದಾರೆ.