ಮೈಸೂರು, ಡಿ.18 (Daijiworld/PY): 5ನೇ ಮಹಡಿಯಿಂದ ಬಿದ್ದು ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಬಾಲಕನನ್ನು ದಿವ್ಯಾಂಶ್ ಎಂದು ಗುರುತಿಸಲಾಗಿದೆ.
ಕಳೆದ ಕೆಲ ದಿನಗಳಿಂದ ದಿವ್ಯಾಂಶ್ನ ಅಜ್ಜಿ ಬಾಡಿಗೆಗೆ ಹೊಸ ಮನೆಯನ್ನು ಹುಡುಕುತ್ತಿದ್ದರು. ಇಂದು ಸಹ ಮನೆ ನೋಡಲು ತೆರಳಿದ್ದ ಅಜ್ಜಿಯೊಂದಿಗೆ ದಿವ್ಯಾಂಶ್ ತೆರಳಿದ್ದನು. ಈ ವೇಳೆ ಬಾಲಕ ಅಜ್ಜಿ ಇನ್ವಸ್ಟೆಮೆಂಟ್ ಲೇಔಟ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಖಾಲಿ ಫ್ಲಾಟ್ ಇರುವ ವಿಷಯ ತಿಳಿದು ಅಲ್ಲಿಗೆ ತೆರಳಿದ್ದರು. ಈ ಸಂದರ್ಭ ಅಜ್ಜಿ ಮನೆ ನೋಡುತ್ತಿದ್ದಾಗ ಜೊತೆಯಲ್ಲಿದ್ದ ಮಗು 5ನೇ ಮಹಡಿಯಿಂದ ಕೆಳಗೆ ಬಿದ್ದಿದೆ.
ಆಯತಪ್ಪಿ ಕೆಳಗೆ ಬಿದ್ದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಬಗ್ಗೆ ಅಪಾರ್ಟ್ಮೆಂಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆಯ ಬಗ್ಗೆ ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುವಿನ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ.