ಬಾಲಾಸೋರ್, ಡಿ 18 (DaijiworldNews/MS): ಒಡಿಶಾ ಕರಾವಳಿಯ ತೀರ ಬಾಲಾಸೋರ್ ನಿಂದ ಭಾರತವು ಪರಮಾಣು ಸಾಮರ್ಥ್ಯ ಕಾರ್ಯತಂತ್ರ ಹೊಂದಿರುವ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಈ ಕ್ಷಿಪಣಿಯು ಸಾವಿರದಿಂದ 2 ಸಾವಿರ ಕಿಲೋ ಮೀಟರ್ ದೂರದವರೆಗೆ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದ್ದು ಇದನ್ನು ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಉಡಾವಣೆ ಮಾಡಲಾಯಿತು.
ಪ್ರೈಮ್ ಕ್ಷಿಪಣಿಯ ಪರೀಕ್ಷೆಯ ಸಂದರ್ಭದಲ್ಲಿ ಅದಕ್ಕೆ ಅನೇಕ ಹೊಸ ಫೀಚರ್ಗಳನ್ನು ಅಳವಡಿಸಲಾಗಿದೆ. ಅತ್ಯುನ್ನತ ಮಟ್ಟದ ನಿಖರತೆಯ ಉದ್ದೇಶವನ್ನು ಈ ಕ್ಷಿಪಣಿ ಪರೀಕ್ಷೆ ತನ್ನ ಎಲ್ಲಾ ಯೋಜನಾ ಧ್ಯೇಯೋದ್ದೇಶಗಳನ್ನು ಈಡೇರಿಸಿದೆ ಎಂದು ಪರೀಕ್ಷಾರ್ಥ ಉಡಾವಣೆಯ ಯಶಸ್ಸಿನ ಬಗ್ಗೆ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಗ್ನಿ -ಪಿ ಡಿಆರ್ಡಿಒ ಉಡಾವಣೆ ಮಾಡಲಿರುವ ಅಗ್ನಿ ಕ್ಷಿಪಣಿಯ ಹೊಸ ವರ್ಗದ ಮೊದಲನೆಯ ಕ್ಷಿಪಣಿಯಾಗಿದೆ. ಇದು ಅಗ್ನಿ 3 ಗಿಂತ ಶೇಕಡಾ 50 ರಷ್ಟು ಕಡಿಮೆ ತೂಗುತ್ತದೆ. ಅಗ್ನಿ ಪಿ ಅನ್ನು ಕಂಟೈನರ್ ನಲ್ಲಿ ಹಾಕಲಾಗಿರುವುದರಿಂದ, ಇದನ್ನು ರೈಲು ಮತ್ತು ರಸ್ತೆಯಿಂದ ಉಡಾವಣೆ ಮಾಡಬಹುದು. ಇದನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಬಹುದು ಮತ್ತು ಕಾರ್ಯಾಚರಣೆಯ ಅಗತ್ಯತೆಗಳ ವೇಳೆ ದೇಶಾದ್ಯಂತ ಸಾಗಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.