ನವದೆಹಲಿ, ಡಿ.18 (DaijiworldNews/HR): ಬಿಎಸ್ಎಫ್ ಸಿಬ್ಬಂದಿಗಳು ಪಂಜಾಬ್ನ ಭಾರತ-ಪಾಕಿಸ್ಥಾನ ಗಡಿಯಲ್ಲಿ ಡ್ರೋನ್ ಒಂದನ್ನು ಹೊಡೆದುರುಳಿಸಿರುವುದಾಗಿ ಸೇನಾ ಮೂಲಗಳು ಶನಿವಾರ ತಿಳಿಸಿವೆ.
ಸಾಂದರ್ಭಿಕ ಚಿತ್ರ
ಶುಕ್ರವಾರ ರಾತ್ರಿ 11:10 ರ ಸುಮಾರಿಗೆ ಚೀನಾ ನಿರ್ಮಿತ ಡ್ರೋನ್ ಅನ್ನು ಫಿರೋಜ್ಪುರ ಸೆಕ್ಟರ್ನ ವಾನ್ ಗಡಿ ಪೋಸ್ಟ್ ಬಳಿ ಹೊಡೆದುರುಳಿಸಲಾಗಿದೆ.
ಇನ್ನು ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 300 ಮೀಟರ್ ಮತ್ತು ಗಡಿ ಬೇಲಿಯಿಂದ 150 ಮೀಟರ್ ದೂರದಲ್ಲಿ ಕಪ್ಪು ಬಣ್ಣದ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಸೇನಾ ಪಡೆ ತಿಳಿಸಿದೆ.