ದಾಂತೇವಾಡ, ಡಿ.18 (Daijiworld/PY): ಶನಿವಾರ ಮುಂಜಾನೆ ಛತ್ತೀಸ್ಗಢದ ದಾಂತೇವಾಡದ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳು ಸಾವನ್ನಪ್ಪಿರುವುದಾಗಿ ದಾಂತೇವಾಡದ ಎಸ್ಪಿ ಅಭಿಷೇಕ್ ಪಲ್ಲವ್ ಹೇಳಿದ್ಧಾರೆ.
ಮೃತ ಮಹಿಳಾ ಮಾವೋವಾದಿಗಳನ್ನು ಹಿಡ್ಮೆ ಕೊಹ್ರಾಮೆ ಹಾಗೂ ಪೊಜ್ಜೆ ಎಂದು ಗುರುತಿಸಲಾಗಿದೆ. ಇವರ ಪತ್ತೆ 5 ಲಕ್ಷ ರೂ. ಹಾಗೂ 1 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಅವರು, "ದಾಂತೇವಾಡ ಡಿಆರ್ಜಿ ಹಾಗೂ ಮಾವೋವಾದಿಗಳ ಮಧ್ಯೆ ಗೊಂಡರಾಸ್ ಅರಣ್ಯದ ಸಮೀಪ ಶನಿವಾರ ಬೆಳಗ್ಗೆ 5.30ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ" ಎಂದಿದ್ದಾರೆ.
ಶೋಧ ಕಾರ್ಯಾಚರಣೆಯ ಸಂದರ್ಭ ಇಬ್ಬರು ಮಹಿಳಾ ಮಾವೋವಾದಿಗಳ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ.
"ಮೂರು ರೈಫಲ್ಗಳು ಸೇರಿದಂತೆ ಮದ್ದುಗುಂಡುಗಳು, ಸಂವಹನ ಸಾಧನಗಳು ಹಾಗೂ ಸ್ಪೋಟಕ ವಸ್ತುಗಳನ್ನು ಮಹಿಳಾ ಮಾವೋವಾದಿಗಳಿಂದ ವಶಪಡಿಸಕೊಳ್ಳಲಾಗಿದೆ. ತಲೆಮರೆಸಿಕೊಂಡ ಮಾವೋವಾದಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.