ನವದೆಹಲಿ, ಡಿ. 17 (DaijiworldNews/HR): ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಇದೀಗ ದೇಶದ 11 ರಾಜ್ಯಗಳಲ್ಲಿ 101 ಪ್ರಕರಣಗಳು ಪತ್ತೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ದೇಶದ 11 ರಾಜ್ಯಗಳಲ್ಲಿ 101 ಜನರಿಗೆ ಓಮಿಕ್ರಾನ್ ವೈರಸ್ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ 32, ದೆಹಲಿಯಲ್ಲಿ 22, ರಾಜಸ್ಥಾನ 17, ಕರ್ನಾಟಕ 8 ಸೇರಿದಂತೆ 11 ರಾಜ್ಯಗಳಲ್ಲಿ 101 ಜನರಿಗೆ ರೂಪಾಂತರಿ ಓಮಿಕ್ರಾನ್ ವೈರಸ್ ಸೋಂಕು ದೃಢಪಟ್ಟಿದೆ ಎಂದು ಮಾಹಿತು ನೀಡಿದ್ದಾರೆ.