ಬೆಳಗಾವಿ, ಡಿ.17 (Daijiworld/PY): "ಸರ್ಕಾರಕ್ಕೆ ರಮೇಶ್ ಕುಮಾರ್ ಹೇಳಬೇಕಾದ ಭಾಷೆಯಲ್ಲಿ ಹೇಳಿದ್ದಾರೆ" ಎಂದು ಎಂಎಲ್ ಸಿ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರಕ್ಕೆ ಯಾವ ರೀತಿಯಲ್ಲಿ ಯಾವ ಭಾಷೆಯಲ್ಲಿ ಹೇಳಿದರೂ ಅರ್ಥವಾಗುತ್ತಿಲ್ಲ. ಹಾಗಾಗಿ, ರಮೇಶ್ ಕುಮಾರ್ ಹೇಳಬೇಕಾದ ಭಾಷೆಯಲ್ಲಿ ಹೇಳಿದ್ದಾರೆ" ಎಂದಿದ್ದಾರೆ.
"ಸರ್ಕಾರಕ್ಕೆ ರಮೇಶ್ ಕುಮಾರ್ ಅವರ ಭಾಷೆಯೇ ಸರಿ. ರಾಜ್ಯ ಸರ್ಕಾರಕ್ಕೆ ಯಾವ ಭಾಷೆಯಲ್ಲಿ ಸಹ ಹೇಳಿದರು ಅರ್ಥವಾಗಿಲ್ಲ. ಹಾಗಾಗಿ ರಮೇಶ್ ಕುಮಾರ್ ಅವರು ಹೇಳಬೇಕಾದ ಭಾಷೆಯಲ್ಲಿ ತಿಳಿಸಿದ್ದಾರೆ. ರಮೇಶ್ ಕುಮಾರ್ ಅವರು ಯಾವ ದೃಷ್ಟಿಕೋನದಿಂದ ಮಾತನಾಡಿದ್ದಾರೆ ಎನ್ನುವುದನ್ನು ನೋಡಬೇಕಾಗುತ್ತದೆ" ಎಂದು ಹೇಳಿದ್ದಾರೆ.
"ನನಗೂ ಸಹ 8 ಹೆಣ್ಣು ಮಕ್ಕಳಿದ್ಧಾರೆ. ಅವರೆಲ್ಲರ ರಕ್ಷಣೆ ನನ್ನ ಜವಾಬ್ದಾರಿ. ಹೆಣ್ಣು ಮಕ್ಕಳ ಬಗ್ಗೆ ಯಾರೂ ಆ ರೀತಿ ಮಾತನಾಡಲ್ಲ. ರಮೇಶ್ ಕುಮಾರ್ ಅವರು ಯಾವ ರೀತಿಯಲ್ಲಿ ಅರ್ಥದಲ್ಲಿ ಹೇಳಿದ್ದಾರೆ ಎಂದು ತಿಳಿದಿಲ್ಲ" ಎಂದಿದ್ದಾರೆ.
"ಸದಾ ನಗುತ್ತಿರುವ ಸದಾನಂದ ಗೌಡರದ್ದು ವಿಡಿಯೋ ಇದೆ. ಅವರೂ ಸಹ ಕೋರ್ಟ್ನಿಂದ ಸ್ಟೇ ತಂದಿದ್ದರು. ವಿಡಿಯೋ ಪ್ರವಾಸ ಮಾಡದಂತ ಕೋರ್ಟ್ನಿಂದ ಸ್ಟೇ ತರುವಂತದ್ದು ಅದರಲ್ಲಿ ಏನಿದೆ?. ಅದೇನು ವಿಡಿಯೋ? ಈ ಕುರಿತು ಸರ್ಕಾರ ಸಂಘಪರಿವಾರ ಸುಮ್ಮನಿರುವುದು ಏಕೆ? ಮಾನವಂತರಾಗಿದ್ದರೆ ಸ್ಟೇ ಏಕೆ ತರುತ್ತಿದ್ದರು?" ಎಂದು ಕೇಳಿದ್ದಾರೆ.