ನವದೆಹಲಿ, ಡಿ. 17 (DaijiworldNews/HR): ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಳೆದ ಏಳು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರ ಆರೋಪಗಳು ಬಂದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಮ್ಮಿಂದ ಕೆಲವು ತಪ್ಪು ನಿರ್ಧಾರಗಳು ಆಗಿರಬಹುದು. ಆದರೆ ನಮ್ಮ ಉದ್ದೇಶ ತಪ್ಪು ಎಂದು ಯಾರೂ ಹೇಳಲು ಸಾಧ್ಯವಿಲ್ಲ" ಎಂದರು.
ಇನ್ನು ಜನರು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲಾರಂಭಿಸಿದ್ದ ದಿನಗಳಲ್ಲಿ ಮೋದಿ ಅಧಿಕಾರ ವಹಿಸಿಕೊಂಡರು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ವಿಫಲವಾಗುತ್ತಿದೆಯೇ ಎಂದು ದೇಶವು ಆಶ್ಚರ್ಯ ಪಡುತ್ತಿತ್ತು. ಆದರೆ ಮೋದಿ ಅವರು ನಮ್ಮ ಬಹುಪಕ್ಷೀಯ ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ಮೂಡುವಂತೆ ಮಾಡಿದ್ದಾರೆ" ಎಂದಿದ್ದಾರೆ.