ಬೆಂಗಳೂರು, ಡಿ 17 (DaijiworldNews/MS): ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನವೂ ಕಾಂಗ್ರೆಸ್ ಪಕ್ಷದ ಒಳಜಗಳಕ್ಕೆ ಬಲಿಯಾಗುತ್ತಿದೆ ಎಂದು ಬಿಜೆಪಿಯೂ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವೂ, " ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಎರಡು ವರ್ಷದ ಬಳಿಕ ಬೆಳಗಾವಿಯಲ್ಲಿ ವಿಧಾನ ಮಂಡಲದ ಕಲಾಪ ನಡೆಯುತ್ತಿದೆ.ಆದರೆ ಕಾಂಗ್ರೆಸ್ ಪಕ್ಷದ ಕ್ಷುಲ್ಲಕ ರಾಜಕಾರಣ ಹಾಗೂ ಪ್ರತಿಭಟನೆಗೆ ಪೂರ್ಣ ಅಧಿವೇಶನ ಬಲಿಯಾಗುತ್ತಿದೆ.ಅಧಿವೇಶನದ ಆಶಯವನ್ನು ಕಾಂಗ್ರೆಸ್ ನಾಯಕರು ಮಣ್ಣು ಪಾಲು ಮಾಡುತ್ತಿದ್ದಾರೆ" ಎಂದು ಹೇಳಿದೆ.
"ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನವೂ ಕಾಂಗ್ರೆಸ್ ಪಕ್ಷದ ಒಳಜಗಳಕ್ಕೆ ಬಲಿಯಾಗುತ್ತಿದೆ.ಪ್ರಚಾರದ ಆಸೆಗಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ದಿನಕ್ಕೊಂದು ಪ್ರಹಸನ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಕರ್ನಾಟಕದ ವಿಕಾಸ ಬೇಕಿಲ್ಲ. ಅದಕ್ಕಾಗಿ ಅರಾಜಕತೆ ಸೃಷ್ಟಿಸುತ್ತಿದೆ" ಎಂದು ಆರೋಪಿಸಿದೆ
"ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒಳಗೊಂಡಂತೆ ಕಾಂಗ್ರೆಸ್ ಪಕ್ಷದ ನಾಯಕರು ಬೆಳಗಾವಿ ಕಲಾಪದಲ್ಲಿ ಭಾಗಿಯಾಗಿದ್ದಾರೋ ಅಥವಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೋ ಎನ್ನುವ ಸಂಶಯ ರಾಜ್ಯದ ಜನರನ್ನು ಕಾಡುತ್ತಿದೆ. ಜನರಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ. ಎಂತಹ ಜನವಿರೋಧಿಗಳು ನೀವು! " ಎಂದು ಕಿಡಿಕಾರಿದೆ.