ಜೈಪುರ, ಡಿ. 17 (DaijiworldNews/HR): ಪ್ರತಾಪ್ ನಗರದಲ್ಲಿ ವಿವಾಹಿತ ಮಹಿಳೆಯೊಬ್ಬಳು ಈಕೆಯ ತನ್ನ ಗಂಡ ಇಲ್ಲದ ವೇಳೆ ಪ್ರಿಯಕರನೊಂದಿಗೆ ಇದ್ದಾಗ ಇದೇ ಸಮಯದಲ್ಲಿ ಗಂಡ ಬಂದ ಪರಿಣಾಮ ತಪ್ಪಿಸಿಕೊಳ್ಳಲು ಹೋದ ಪ್ರಿಯಕರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾವನ್ನಪ್ಪಿದ ಯುವಕನನ್ನು ಉತ್ತರ ಪ್ರದೇಶ ಮೂಲದ ಮೊಹ್ಸಿನ್ ಎಂದು ಗುರುತಿಸಲಾಗಿದೆ.
ಮೊಹ್ಸಿನ್ ನೊಂದಿಗೆ ಅನೇಕ ವರ್ಷಗಳಿಂದಲೂ ಈಕೆ ಸಂಬಂಧ ಹೊಂದಿದ್ದು, ಕಳೆದೆರಡು ವರ್ಷಗಳ ಹಿಂದೆ ಈತನೊಂದಿಗೆ ಈಕೆ ನೈನಿತಾಲ್ನಿಂದ ಓಡಿ ಹೋಗಿದ್ದಳು. ಬಳಿಕ ಆಕೆ ಜೈಪುರದಲ್ಲಿ ಇರುವ ವಿಷಯ ತಿಳಿದ ಪತಿ ಆಕೆಯನ್ನು ಅಲ್ಲಿಗೆ ಹುಡುಕಿಕೊಂಡು ಬಂದಿ ಮನವೊಲಿಸಿ ಸಂಸಾರ ಮಾಡುತ್ತಿದ್ದ.
ಇನ್ನು ಕಳೆದ ಭಾನುವಾರ ಕೂಡ ಮೊಹ್ಸಿನ್ ಜೊತೆ ಇದ್ದಾಗ ಗಂಡ ಬಂದಿದ್ದಾನೆ. ಈ ವೇಳೆ ಗಾಬರಿಗೊಂಡ ಆತ ಬಾಲ್ಕನಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.