ಬೆಳಗಾವಿ, ಡಿ. 17 (DaijiworldNews/HR): ಪರಿಶಿಷ್ಟ ಸಮುದಾಯದ ಭೂ ಒಡೆತನ ಯೋಜನೆಯಲ್ಲಿ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ನಾರಾಯಣಸ್ವಾಮಿ ಅವರು ವಿಧಾನ ಪರಿಷತ್ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಸಿ-ಎಸ್ಟಿ ಸಮುದಾಯದ ಭೂ ಒಡೆತನ ಯೋಜನೆಯಡಿ 1991 ರಿಂದ 2021ರವರೆಗೆ ಒಟ್ಟು 55,920 ಎಕರೆ 49 ಸಾವಿರ ಫಲಾನುಭವಿಗಳಿಗೆ ಹಂಚಲಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಬಡವರ ಕೈಗೆ ಸಿಕ್ಕಿಲ್ಲ, ತಾರತಮ್ಯವಾಗುತ್ತಿದೆ ಎಂಬ ಆರೋಪವಿದ್ದು, ಎರಡು ತಿಂಗಳಿನಲ್ಲಿ ಸಭೆ ನಡೆಸಿ ಸಮೀಕ್ಷೆ ನಡೆಸಲು ಸೂಚಿಸಿದ್ದೇನೆ" ಎಂದರು.
ಇನ್ನು ಮಾಲೀಕರ ಕೈನಲ್ಲೇ ಭೂಮಿ ಇತ್ತು ಅಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಇನ್ನು ಮುಂದೆ ಜಿಪಿಎಸ್ ಅಳವಡಿಸಿ ಸಮೀಕ್ಷೆ ನಡೆಸುತ್ತೇವೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಭೂಮಿ ಹಂಚಲಾಗುವುದು" ಎಂದಿದ್ದಾರೆ.
197 ಜಾತಿಗಳಿರುವ ಸಂಸ್ಥೆಗೆ ಕೊಟ್ಟಿರುವ ಹಣ ಸಾಲುತ್ತಿಲ್ಲ. ಬಿಜೆಪಿ ಸರ್ಕಾರ ಅಕಾರಕ್ಕೆ ಬಂದ ನಂತರ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗುತ್ತಿದ್ದು, ದುರ್ಬಲ ವರ್ಗಗಳ ಮೀಸಲಾತಿ ಜಾರಿಗೆ ಬಂದ ಮೇಲೆ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲೂ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕೋಟಾ, ದೇವರಾಜ್ ಅರಸು ಸಂಶೋಧನಾ ಸಂಸ್ಥೆ ಮುಚ್ಚಲು ಶಿಫಾರಸು ಮಾಡಿಲ್ಲ, ಅದನ್ನು ಮುಚ್ಚುವುದಿಲ್ಲ, ಮತ್ತಷ್ಟು ಪ್ರಬಲವಾಗಿ ಅಭಿವೃದ್ಧಿ ಮಾಡುತ್ತೇವೆ. ನನಗೆ ಎರಡು ಎಕರೆ ಭೂಮಿ ಇದ್ದರೆ ಅದು ದೇವರಾಜ ಅರಸ್ಸು ಅವರು ಜಾರಿಗೆ ತಂದ ಭೂ ಸುಧಾರಣಾ ಮಸೂದೆ ಕಾಯ್ದೆಯಿಂದ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ದೇವರಾಜ ಅರಸು ಸಂಶೋಧನಾ ಅಭಿವೃದ್ಧಿ ನಿಗಮವನ್ನು ಮತ್ತಷ್ಟು ಬಲಗೊಳಿಸುತ್ತೇವೆ" ಎಂದು ಹೇಳಿದ್ದಾರೆ.