ಬೆಂಗಳೂರು, ಡಿ. 17 (DaijiworldNews/HR): ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದ ಪಡಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿ ತಾವು ನೀಡಿದ್ದ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಕ್ಷಮೆ ಯಾಚಿಸಿದ್ದರೂ ಅವರ ವಿರುದ್ಧ ಖಂಡನೆ ಮಾತ್ರ ಕಡಿಮೆಯಾಗಿಲ್ಲ. ರಮೇಶ್ ಕುಮಾರ್ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿ ಅನುಭವಿಸಲಿ ಎಂದು ಸಚಿವ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಮುನಿರತ್ನ, ಇಂದು ರಮೇಶ್ ಕುಮಾರ್ ಹೆಣ್ಮಕ್ಕಳಿಗೆ ಮಾಡಿರುವ ಅಪಮಾನ ಮುಂದಿನ ಜನ್ಮದಲ್ಲಿ ಅವರು ಹೆಣ್ಣಾಗಿ ಹುಟ್ಟಿ ಆ ಸ್ಥಿತಿಯನ್ನು ಅನುಭವಿಸಲಿ. ಒಂದು ತಾಯಿ, ಹೆಂಡತಿ, ತಂಗಿ, ಮಗಳು ಎಲ್ಲವೂ ಆಗಿರುವ ಹೆಣ್ಣನ್ನು ಅತ್ಯಾಚಾರವಾದರೆ ಎಂಜಾಯ್ ಮಾಡಿ ಎಂದು ಹೇಳುವ ಅವರ ಮನಸ್ಥಿತಿ ಎಂಥಾದ್ದಿರಬಹುದು ಎಂದು ತೋರಿಸುತ್ತದೆ" ಎಂದು ಕಿಡಿಕಾರಿದ್ದಾರೆ.
ಇನ್ನು ಒಂದು ಹೆಣ್ಣುಮಗುವಿನ ನೋವೇನು? ಅದರಲ್ಲೂ ಅತ್ಯಾಚಾರವಾದಂತ ಆಕೆ ಸ್ಥಿತಿ ಏನಿರಬಹುದು ಎಂಬುದನ್ನು ಯೋಚಿಸದೇ ಲಘುವಾಗಿ ಮಾತನಾಡಿ ಅಪಮಾನ ಮಾಡುತ್ತಿರುವುದು ಖಂಡನೀಯ" ಎಂದು ಹೇಳಿದ್ದಾರೆ.