ಬೆಳಗಾವಿ, ಡಿ.17 (Daijiworld/PY): "ಜನವರಿ 14ರ ಬಳಿಕ ನಾನು ಸಿಎಂ ಆಗುತ್ತೇನೆ ಎಂದು ಹೇಳಿಕೆಕೊಂಡು ವ್ಯಕ್ತಿಯೋರ್ವ ಹುಚ್ಚನಂತೆ ಹೇಳಿಕೊಂಡು ಓಡಾಡುತ್ತಿದ್ದೇನೆ" ಎಂದು ಸಚಿವ ಮುರುಗೇಶ ನಿರಾಣಿ ಅವರನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪರೋಕ್ಷವಾಗಿ ಟೀಕಿಸಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಮಹಾನ್ ನಾಯಕರನ್ನು ಆತ ಎಲ್ಲಾ ರೀತಿಯಲ್ಲೂ ಸಂತೃಪ್ತಿಪಡಿಸಿದ್ದೇನೆ. ಸಕಲ ಐಶ್ವರ್ಯ, ಬೋಗಗಳನ್ನುಅವರಿಗೆ ದಯಪಾಲಿಸಿದ್ದೇನೆ. ಹಾಗಾಗಿ ನಾನೇ ಸಿಎಂ ಆಗುತ್ತೇನೆ ಎಂದು ಭಾವಿಸಿದ್ದಾರೆ" ಎಂದು ದೂರಿದ್ದಾರೆ.
ಜನವರಿ ತಿಂಗಳ ಬಳಿಕ ರಾಜಕೀಯ ಬದಲಾವಣೆ ಆಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು," ಪ್ರಧಾನ ಮಂತ್ರಿಗಳು ಬಹಳ ಗಟ್ಟಿಯಾಗಿದ್ದಾರೆ. ಯಾವುದೇ ಆಸೆ ಅಥವಾ ಆಮಿಷಗಳಿಗೆ ಒಳಗಾಗದೇ ಸಿಎಂ ಬದಲಾವಣೆ ಆಗುವುದಿಲ್ಲ. ಸಿಎಂ ಆಗುತ್ತೇನೆ ಎಂದು ಹೇಳಿಕೊಂಡು ಓಡಾಡು ಬಾಯಿಗೆ ಮೊದಲು ಬೀಗ ಹಾಕಬೇಕು. ಅಂತವರು ಸಿಎಂ ಆದಲ್ಲಿ ದೊಡ್ಡ ಅನಾಹುತ ಸಂಭವಿಸುತ್ತದೆ ಎಂದು ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ಎಚ್ಚರಿಸಿದ್ದೇನೆ" ಎಂದಿದ್ದಾರೆ.