ಅಸ್ಸಾಂ, ಡಿ 17 (DaijiworldNews/MS): ಅಕ್ರಮವಾಗಿ ಸ್ಥಳೀಯ ಶ್ವಾನಗಳನ್ನು ನಾಗಾಲ್ಯಾಂಡ್ಗೆ ಕಳ್ಳಸಾಗಾಟವನ್ನು ಪತ್ತೆಹಚ್ಚಿರುವ ಪುಲಿಬೋರ್ ಪೊಲೀಸರು 24 ನಾಯಿಗಳನ್ನು ರಕ್ಷಿಸಿ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ನಾಯಿಗಳಿಗೆ ಹಗ್ಗ ಮತ್ತು ಗೋಣಿಚೀಲಗಳಿಂದ ಕಟ್ಟಲಾಗಿತ್ತು. ನಾಯಿಗಳಿಗೆ ಪ್ರಜ್ಞೆ ತಪ್ಪಿಸಲು ಔಷಧಗಳನ್ನು ಚುಚ್ಚಲಾಗಿತ್ತು. ಕಳ್ಳಸಾಗಣೆದಾರರು ಬಹಳ ದಿನಗಳಿಂದ ಆ ಪ್ರದೇಶಗಳಿಗೆ ನಾಯಿಗಳನ್ನು ಸಾಗಾಟ ಮಾಡುತ್ತಿದ್ದು, ಪ್ರತಿ ನಾಯಿಯನ್ನು 2,500 ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎಂದು ಜೋರ್ಹತ್ ಡಿಎಸ್ಪಿ ಮಾಮೋನಿ ಹಜಾರಿಕಾ ಮಾಹಿತಿ ನೀಡಿದ್ದಾರೆ.
ಪುಲಿಬೋರ್ ಪೊಲೀಸರು ಡಿಸೆಂಬರ್ 15 ರಂದು ಸಂಜೆ 6.30ರ ಸುಮಾರಿಗೆ 24 ನಾಯಿಗಳನ್ನು ರಕ್ಷಿಸಿ ಮತ್ತು ದೋಕುರ್ ಡೋಲಿ ಎಂಬ ಕಳ್ಳಸಾಗಣೆದಾರನನ್ನು ಬಂಧಿಸಲಾಗಿದೆ. ರಕ್ಷಿಸಲಾದ ನಾಯಿಗಳು ಈಗ ಆರೋಗ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.