ಹಾಸನ, ಡಿ.17 (Daijiworld/PY): "ಈಗಲೂ ನಾನು ಬಿಜೆಪಿಯಲ್ಲಿದ್ದೇನೆ. ಯಾವ ಪಕ್ಷಕ್ಕೆ ನನ್ನ ಮತದಾರರು ಹೋಗಿ ಎನ್ನುತ್ತಾರೋ ಅಲ್ಲಿಗೆ ಹೋಗುತ್ತೇನೆ" ಎಂದು ಮಾಜಿ ಸಚಿವ ಎ ಮಂಜು ಹೇಳಿದ್ದಾರೆ.
ಅರಕಲಗೂಡು ತಾಲೂಕಿನ ಕೊಣಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರು ನನಗೆ ಅವಮಾನ ಮಾಡಿದ್ದಾರೆ. ಅದಕ್ಕೆ ಅವರು ಅನುಭವಿಸುತ್ತಿದ್ದಾರೆ. ನನಗೆ ಅವಮಾನ ಮಾಡಿದ್ದಕ್ಕೆ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿಗೆ 421 ಮತ ಬಂದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನನ್ನ ಕುಟುಂಬವು ಶಾಸಕ ಪ್ರೀತಮ್ ಗೌಡ ನಡೆಯಿಂದ ನನ್ನ ಕುಟುಂಬವು ಡಿಸ್ಟರ್ಬ್ ಆಗಿದೆ. ಪುತ್ರ ಮಂಥರ್ ಗೌಡನಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದೇನೆ ಹೊರತು ಬಿಜೆಪಿ ವಿರುದ್ದ ಹೇಳಿಕೆಗಳನ್ನು ನೀಡಿಲ್ಲ. ಹಾಸನದ ಎಂಎಲ್ಸಿ ಚುನಾವಣೆಯಲ್ಲಿ ನಾಯಕರ ಕೊರತೆ ಎರಡು ಪಕ್ಷಗಳು ಹೀನಾಯವಾಗಿ ಸೋಲಿಗೆ ಕಾರಣವಾಗಿದೆ" ಎಂದು ಆರೋಪಿಸಿದ್ದಾರೆ.
"ಹಾಸನದ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಸೋಲಲು ಜಿಲ್ಲಾ ಉಸ್ತುವಾರಿ ಸಚಿವರು ಹೊಣೆಯಾಗಬೇಕು. ಹಾಸನದಲ್ಲಿ ಯಾರೊಬ್ಬರೂ ಸಹ ಜವಾಬ್ದಾರಿಯಿಂದ ವರ್ತಿದಸೆ ಬಿಜೆಪಿಗೆ ಇಂತಹ ಸ್ಥಿತಿ ಬಂದಿದೆ" ಎಂದು ದೂರಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಕೊಡಗಿನಲ್ಲಿ ಮಂಥರ್ ಗೌಡ ಸೋಲು ಕಂಡಿದ್ದು, ಈ ಹಿನ್ನೆಲೆಯಲ್ಲಿ ಹಾಸನದ ಬಿಜೆಪಿ ಶಾಸಕ ಪ್ರೀತಮ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಹಾಸನದಿಂದ ನನ್ನ ಪುತ್ರನಿಗೆ ಟಿಕೆಟ್ ಕೊಡಿ ಎಂದು ಕೇಳಿರಲಿಲ್ಲ. ಬಿಜೆಪಿಯವರೇ ಮಂಥರ್ ಗೌಡರಿಗೆ ಟಿಕೆಟ್ ಕೊಡುತ್ತೇವೆ ಎಂದಿದ್ದರು. ನಳಿಕ ನಾನು 5 ಕೋಟಿ ಬಂಡವಾಳ ಹಾಕುತ್ತೇನೆ" ಎಂದು ಹಾಸನದ ಶಾಸಕರು ಹೇಳಿ ಪಕ್ಷದ ಸಭೆಯಲ್ಲಿ ಭರವಸೆ ನೀಡಿದ್ದರು.