ಪಾಟ್ನಾ, ಡಿ. 17 (DaijiworldNews/HR): ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಅವರಿಗೆ ವಿದೇಶದಿಂದ ದೂರವಾಣಿ ಮೂಲಕ ತಮಗೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ಆರೋಪಿಸಿದ್ದಾರೆ.
ಹರಿಭೂಷಣ್ ಠಾಕೂರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ, ರಾಜ್ಯದಲ್ಲಿ ತೆರೆದ ಸ್ಥಳದಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದು, ಇದೇ ಕೊಲೆ ಬೆದರಿಕೆಗೆ ಕಾರಣ ಎಂದು ಶಂಕಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಹರಿಭೂಷಣ್ ಠಾಕೂರ್, ನನ್ನ ಮೊಬೈಲ್ಗೆ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಅನಾಮಧೇಯ ಕರೆ ಬಂದಿದ್ದು, ಕೊಲೆ ಬೆದರಿಕೆ ಹಾಕಿದ್ದಾರೆ. ಬಹಿರಂಗ ನಮಾಜ್ ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಆಗ್ರಹಿಸುವುದು ಮತ್ತು ವಂದೇ ಮಾತರಂ ಹಾಡದವರನ್ನು ವಿರೋಧಿಸುವುದು ಮುಂತಾದ ವಿಷಯಗಳನ್ನು ಶಾಸಕರು ಈ ಹಿಂದೆ ಪ್ರಸ್ತಾಪಿಸಿದ್ದರು. ಬಹುಶಃ ಅದಕ್ಕಾಗಿಯೇ ಕೊಲೆ ಬೆದರಿಕೆ ಕರೆ ಬಂದಿರಬಹುದು ಎಂದು ಹೇಳಿದ್ದಾರೆ.
ಇನ್ನು ನಾನು ಇಂಥ ಬೆದರಿಕೆಗೆಲ್ಲ ಹೆದರುವುದಿಲ್ಲ. ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಹೋರಾಟ ಮುಂದುವರಿಯುತ್ತದೆ. ನಾನು ದೇಶದ ಹಿತಾಸಕ್ತಿಯ ಬಗ್ಗೆ ಮಾತನಾಡುತ್ತಿರುವು" ಎಂದು ಹೇಳಿದ್ದಾರೆ.