ಮೈಸೂರು, ಡಿ 17 (DaijiworldNews/MS): ನಂದಿನಿ ತುಪ್ಪದ ಹೆಸರಿನಲ್ಲಿ ಡಾಲ್ಡಾ ಪಾಮೊಲಿನ್ ತುಪ್ಪವನ್ನು ಮಿಶ್ರಣ ಮಾಡಿ ನಕಲಿ ತುಪ್ಪ ತಯಾರಿಸುತ್ತಿದ್ದ ಅಕ್ರಮ ಘಟಕದ ಮೇಲೆ ಮೈಮುಲ್ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ನಂದಿನಿ ತುಪ್ಪದ ಟಿನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಹ್ಯೂಮನ್ ರೈಟ್ಸ್ ಸಂಘಟನೆಯ ಸದಸ್ಯರು ಮೊದಲು ದಾಳಿ ನಡೆಸಿ ಆ ಬಳಿಕ ಮೈಮುಲ್’ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು. ಮೈಮುಲ್ನ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ.ಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನಕಲಿ ನಂದಿನಿ ತುಪ್ಪ ತಯಾರಿಸುತ್ತಿದ್ದುದು ಖಚಿತಗೊಂಡಿದೆ.
ಮೈಸೂರಿನ ಹೊರವಲಯದ ಹೊಸಹುಂಡಿ ಗ್ರಾಮದ ಹೊರವಲಯದಲ್ಲಿ ನಕಲಿ ನಂದಿನಿ ತುಪ್ಪ ತಯಾರಿಸಿ ಲೋಡ್ ಮಾಡಿ ಹಲವೆಡೆ ಕಡಿಮೆ ಬೆಲೆಗೆ ವಿತರಣೆ ಮಾಡುತ್ತಿದ್ದರು ಎನ್ನಲಾಗಿದೆ. ದಾಳಿ ವೇಳೆ ಸುಮಾರು ಒಂದೂವರೆ ಟನ್ನಷ್ಟು ಕಲಬೆರಕೆ ತುಪ್ಪ, 500 ಕೆ.ಜಿ ವನಸ್ಪತಿ, 500 ಲೀಟರ್ ಪಾಮೊಲಿನ್ನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿ ಬಳಿಕ ಮಾತನಾಡಿದ ಜಯಕುಮಾರ್ , ಗ್ರಾಹಕರು ಗೊಂದಲಕ್ಕೆ ಒಳಗಾಗದೇ ನಂದಿನಿ ಪಾರ್ಲರ್ಗಳಲ್ಲಿ ತುಪ್ಪ ಖರೀದಿಸಬಹುದು’ ಎಂದು ಹೇಳಿದ್ದಾರೆ. ನಕಲಿ ತುಪ್ಪದ ಬಾಟಲಿ ಹಾಗೂ ಪ್ಯಾಕೆಟ್ ಮೇಲಿನ ಲೇಬಲ್ ಗಳಲ್ಲಿ ಪ್ರಿಟಿಂಗ್ ಬ್ಲರ್ ಆಗಿದ್ದು, ಜಿಗ್ಜಾಗ್ ರೀತಿಯಲ್ಲಿ ಸೀಲಿಂಗ್ ಮಾಡಲಾಗಿರುವುದನ್ನು ಗಮನಿಸಬಹುದು. ಮಾತ್ರವಲ್ಲದೆ ನಕಲಿ ಪ್ಯಾಕೆಟ್ ನಲ್ಲಿ ಕ್ವಾಲಿಟಿ ಮಾರ್ಕ್ ಇಲ್ಲ. ಗ್ರಾಹಕರು ಗೊಂದಲ ಪಡೆದೆ ನಂದಿನಿ ಪಾರ್ಲರ್ಗಳಲ್ಲಿ ತುಪ್ಪ ಖರೀದಿಸಬಹುದು ಎಂದು ಹೇಳಿದರು.