ಮಡಿಕೇರಿ, ಡಿ.16 (DaijiworldNews/SM): ಇಲ್ಲಿ ಎಸ್.ಐ. ಆಗಿದ್ದ ಚಿನ್ನಪ್ಪ ನಾಯ್ಕ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಚಿನ್ನಪ್ಪ ನಾಯ್ಕ ಸುಳ್ಯ ತಾಲೂಕು ನಡುಗಲ್ಲು ನಿವಾಸಿಯಾಗಿದ್ದಾರೆ.
ಚಿನ್ನಪ್ಪ ನಾಯ್ಕ ರಜೆ ಹಿನ್ನೆಲೆಯಲ್ಲಿ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಚಿನ್ನಪ್ಪ ನಾಯ್ಕ ನವೆಂಬರ್ ತಿಂಗಳಿನಲ್ಲಿ ಎಸ್.ಐ.ಆಗಿ ಭಡ್ತಿಗೊಂಡಿದ್ದರು. ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದರು.