ಬೆಂಗಳೂರು, ಡಿ.16 (Daijiworld/PY): "ಮಾಜಿ ಸಿಎಂ ಹಾಲಿ ಸಿಎಂಗೆ ಹಾಗೂ ಬಿಜೆಪಿಗೆ ಬಟ್ಟೆಯಲ್ಲಿ ಕಲ್ಲಿಟ್ಟು ಹೊಡೆದಿದ್ದಾರೆ! ಕೇಂದ್ರದ ನೆರವನ್ನು ಕಾಯಬೇಡಿ ಎನ್ನುವ ಮೂಲಕ ಕರ್ನಾಟಕದೆಡೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಬೊಮ್ಮಾಯಿ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಎಸಗುತ್ತಿರುವ ಅನ್ಯಾಯವನ್ನೂ ಹೇಳಿದ್ದಾರೆ. ಬಿಜೆಪಿಗೆ ಇದಕ್ಕಿಂತ ವಿಮರ್ಶೆ ಬೇಕೇ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಮಾಜಿ ಸಿಎಂ ಹಾಲಿ ಸಿಎಂಗೆ ಹಾಗೂ ಬಿಜೆಪಿಗೆ ಬಟ್ಟೆಯಲ್ಲಿ ಕಲ್ಲಿಟ್ಟು ಹೊಡೆದಿದ್ದಾರೆ! ಕೇಂದ್ರದ ನೆರವನ್ನು ಕಾಯಬೇಡಿ ಎನ್ನುವ ಮೂಲಕ ಕರ್ನಾಟಕದೆಡೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಬೊಮ್ಮಾಯಿ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಎಸಗುತ್ತಿರುವ ಅನ್ಯಾಯವನ್ನೂ ಹೇಳಿದ್ದಾರೆ. ಬಿಜೆಪಿಗೆ ಇದಕ್ಕಿಂತ ವಿಮರ್ಶೆ ಬೇಕೇ?" ಎಂದು ಕೇಳಿದೆ.
"ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಒಂದೇ ಹೇಳಿಕೆಯಲ್ಲಿ ಬಿಜೆಪಿಯ ಬಂಡವಾಳ ಬಯಲಾಗಿದೆ. ಕೇಂದ್ರ ಸರ್ಕಾರದ ನೆರವು ನೀಡುವುದಿಲ್ಲ. ರಾಜ್ಯ ಸರ್ಕಾರ ಅತಿವೃಷ್ಟಿಯ ಸಂತ್ರಸ್ತರಿಗೆ ನೆರವಿಗೆ ನಿಲ್ಲುತ್ತಿಲ್ಲ. 25 ಸಂಸದರು ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ವೈಫಲ್ಯಕ್ಕೆ ಸಾಕ್ಷಿ ಇನ್ನೇನು ಬೇಕು?" ಎಂದು ಪ್ರಶ್ನಿಸಿದೆ.
"ರಾಜ್ಯ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಇದು 40% ಸರ್ಕಾರ ಎಂದು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಪುರಾವೆಯಿಲ್ಲದಿದ್ದರೂ ಪ್ರಧಾನಿಗಳು ನಮ್ಮ ಸರ್ಕಾರವನ್ನು 10% ಸರ್ಕಾರ ಎಂದಿದ್ದರು. ಇದು 40% ಸರ್ಕಾರ ಎನ್ನುವುದಕ್ಕೆ ಪುರಾವೆಗಳಿವೆ, ಈಗ ಎಲ್ಲವನ್ನೂ ತನಿಖೆ ಮಾಡಿಸಲಿ" ಎಂದು ಒತ್ತಾಯಿಸಿದೆ.
"ಕಳೆದ ಬಾರಿಯ ಬಿಜೆಪಿ ಆಡಳಿತದಲ್ಲಿ ಬೆಂಗಳೂರಿನ ಕಸದ ಸಮಸ್ಯೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು, ಈಗಲೂ ಮತ್ತದೇ ಸ್ಥಿತಿ ನಿರ್ಮಾಣವಾಗುತ್ತಿದೆ. ತ್ಯಾಜ್ಯ ಸಂಸ್ಕರಣಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ, ಅವುಗಳ ಬಲವರ್ಧನೆಗೆ ಆಸಕ್ತಿ ತೋರದ ಸರ್ಕಾರ ಎನ್ಜಿಟಿ ಆದೇಶ ಉಲ್ಲಂಘಿಸಿ ಕ್ವಾರಿಗಳಲ್ಲಿ ಕಸ ಸುರಿಯುತ್ತಿದೆ" ಎಂದಿದೆ.
"ಬಿಜೆಪಿ ಆಡಳಿತ ಬಂದಾಗಲೆಲ್ಲಾ ಬೆಂಗಳೂರಿನ ಕಸದ ಸಮಸ್ಯೆ ಉಲ್ಬಣಿಸುತ್ತದೆ. ಹಲವು ತ್ಯಾಜ್ಯ ಸಂಸ್ಕರಣಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ತ್ಯಾಜ್ಯ ಸಂಸ್ಕರಣಾಘಟಕಗಳ ಬಲವರ್ಧನೆಗೆ ಸರ್ಕಾರ ಮುಂದಾಗುತ್ತಿಲ್ಲ" ಎಂದು ಹೇಳಿದೆ.