ಮಲ್ಲಪ್ಪುರಂ, ಡಿ.16 (Daijiworld/PY): ಮೆಟ್ರೋಮ್ಯಾನ್ ಖ್ಯಾತಿಯ ಇ ಶ್ರೀಧರನ್ ಅವರು ಸಕ್ರಿಯ ರಾಜಕಾರಣವನ್ನು ತೊರೆದಿದ್ದಾರೆ.
ಕೇರಳದ ಮಲಪ್ಪುರಂನಲ್ಲಿ ಮಾತನಾಡಿದ ಅವರು, "ಸಕ್ರಿಯ ರಾಜಕಾರಣದಿಂದ ನಾನು ಅಂತರ ಕಾಯ್ದುಕೊಳ್ಳಲು ಬಯಸುತ್ತೇನೆ. ಇದರ ಅರ್ಥ ನಾನು ರಾಜಕಾರಣದಿಂದ ದೂರ ಹೋಗುತ್ತೇನೆ ಎಂದು ಅಲ್ಲ. ಎಪ್ರಿಲ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ಸೋಲಿನಿಂದ ಪಾಠ ಕಲಿತಿದ್ದೇನೆ" ಎಂದಿದ್ದಾರೆ.
"ಎಂದಿಗೂ ನಾನು ರಾಜಕಾರಣಿಯಾಗಿರಲಿಲ್ಲ. ಈಗ ನನಗೆ 90 ವರ್ಷ. ಈಗ ನನಗೆ ರಾಜಕೀಯದ ಕನಸು ಇಲ್ಲ. ನನಗೆ ನನ್ನ ನೆಲದ ಸೇವೆ ಮಾಡಲು ರಾಜಕೀಯದ ಅವಶ್ಯಕತೆ ಇಲ್ಲ. ಈಗಾಗಲೇ ನಾನು ಮೂರು ಟ್ರಸ್ಟ್ಗಳ ಮುಖೇನ ಅದನ್ನು ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಇ ಶ್ರೀಧರನ್ ಅವರು, ಹಾಲಿ ಶಾಸಕ ಶಫಿ ಪರಂಬಿಲ್ ವಿರುದ್ದ 3,859 ಮತಗಳಿಂದ ಸೋಲನುಭವಿಸಿದ್ದರು.