ನವದೆಹಲಿ, ಡಿ.16 (Daijiworld/PY): "ಧರ್ಮನಿಷ್ಠೆಯ ಕನ್ನಡಕ ಧರಿಸಿ, ಅಪರಾಧಿಯನ್ನು ರಕ್ಷಿಸುತ್ತಿದ್ದೀರಿ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರು ವಿರುದ್ದ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಲು ಸರ್ಕಾರ ನಿರಾಕರಿಸಿರುವುದು ಅದರ ನೈತಿಕ ದಿವಾಳಿತನದ ಸ್ಪಷ್ಟ ಸೂಚನೆಯಾಗಿದೆ" ಎಂದಿದ್ದಾರೆ.
"ಎಚ್ಚರಿಕೆಯಿಂದ ಸಂಗ್ರಹಿಸಿದ ಧರ್ಮನಿಷ್ಠೆಯ ಕನ್ನಡಕಗಳು ಹಾಗೂ ಧಾರ್ಮಿಕ ಉಡುಪುಗಳನ್ನು ಧರಿಸುವುದರಿಂದ ನೀವು ಅಪರಾಧಿಯನ್ನು ರಕ್ಷಿಸುತ್ತಿದ್ದೀರಿ ಎಂಬ ಅಂಶವನ್ನು ಬದಲಾಯಿಸಲು ಆಗುವುದಿಲ್ಲ" ಎಂದು ಹೇಳಿದ್ಧಾರೆ.
4 ಮಂದಿ ರೈತರು ಸೇರಿದಂತೆ ಎಂಟು ಮಂದಿಯ ಸಾವಿಗೆ ಕಾರಣರಾದ ಲಖಿಂಪುರ ಖೇರಿ ಹಿಂಸಾಚಾರವು ಪೂರ್ವ ಯೋಜಿತ ಪಿತೂರಿ ಎಂದು ಎಸ್ಐಟಿ ಸ್ಥಳೀಯ ನ್ಯಾಯಾಲಯದಲ್ಲಿ ಹೇಳಿದ ಬಳಿಕ ಸಚಿವರನ್ನು ವಜಾಗೊಳಿಸಬೇಕು ಎಂದಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಲಾಗಿದ್ದು, ನಾಲ್ವರು ರೈತರು ಹಾಗೂ ಪತ್ರಕರ್ತನ ಸಾವಿಗೆ ಸಂಬಂಧಿಸಿದಂತೆ ಎಸ್ಐಟಿ ಮೊದಲ ಎಫ್ಐಆರ್ನಲ್ಲಿ ಆಶಿಶ್ ಮಿಶ್ರಾ ಸೇರಿದಂತೆ 13 ಮಂದಿಯನ್ನು ಬಂಧಿಸಿದೆ.