ಬೆಂಗಳೂರು ಡಿ16 (DaijiworldNews/MS): ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರ ನಿರ್ಧಾರ ವಿರೋಧಿಸಿ ಬ್ಯಾಂಕ್ ಉದ್ಯೋಗಿಗಳು ನಡೆಸುತ್ತಿರುವ ಎರಡು ದಿನಗಳ ಮುಷ್ಕರ ಇಂದು ಆರಂಭವಾಗಿದ್ದು, ಇದರ ಪರಿಣಾಮ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರಿಗೆ ಸಮಸ್ಯೆಯಾಯಿತು.
ಇದು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನೆಡರೇಷನ್ (ಎಐಬಿಒಸಿ), ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ (ಎಐಬಿಇಎ) ಮತ್ತು ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ವರ್ಕರ್ಸ್ (ಎನ್ಒಬಿಡಬ್ಲ್ಯೂ) ಸೇರಿದಂತೆ 9 ಒಂಬತ್ತು ಬ್ಯಾಂಕ್ ಗಳ ಒಕ್ಕೂಟಗಳ ಪ್ರಾತಿನಿಧಿಕ ಸಂಸ್ಥೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್ಬಿಯು) ಡಿ.16ಮತ್ತು ಡಿ.17 ರ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿತ್ತು.
ಮುಷ್ಕರದ ಪರಿಣಾಮವಾಗಿ ಬ್ಯಾಂಕ್ ಶಾಖೆಗಳ ಡಿಪಾಸಿಟ್ಗಳು ಮತ್ತು ಹಣ ಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಮತ್ತು ಸಾಲ ಮಂಜೂರಾತಿಗಳಂತಹ ಆರ್ಥಿಕ ಚಟುವಟಿಕೆಗಳು ತೊಂದರೆಯಾಗಿದೆ. ಆದರೆ, ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವ ಸರ್ಕಾರದ ನಿರ್ಧಾರ ವಿರೋಸಿ ಪ್ರತಿಭಟನೆಯಲ್ಲಿ ದೇಶದಾದ್ಯಂತ ಸುಮಾರು 7 ಲಕ್ಷ ಬ್ಯಾಂಕ್ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.