ಬೆಳಗಾವಿ, ಡಿ.16 (Daijiworld/PY): "ಎಂಎಲ್ಗಳಿಗೆ ಯಾರಾದರೂ ಪಾಸ್ ಕೇಳುತ್ತಾರಾ?. ಸುವರ್ಣಸೌಧದ ಒಳಗೆ ನಮಗೆ ಪ್ರವೇಶಿಸುವುದನ್ನು ಬಿಡದೇ ಇರುವುದು ರಾಜ್ಯ ಬಿಜೆಪಿ ಸರ್ಕಾರದ ಕುಟಿಲ ಯತ್ನವಾಗಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಂಗಳೂರಿನಲ್ಲಿ ವಿಧಾನಸೌಧದ ಒಳಗೆ ಹೋಗಲು ಬಿಟ್ಟಿದ್ದಂತ ಪೊಲೀಸರು ಇದೀಗ ಸುವರ್ಣಸೌಧಕ್ಕೆ ಪ್ರವೇಶಿಸಲು ಬಿಡುತ್ತಿಲ್ಲ. ಅಸೆಂಬ್ಲಿ ಒಳಗೆ ಪ್ರವೇಶಿಸುವುದಕ್ಕೆ ಜನರೇ ಪಾಸ್ ಕೊಟ್ಟಿರುವಾಗ ಅವನ್ ಯಾರ್ರೀ ನಮ್ಮನ್ನು ಪಾಸ್ ಕೇಳೋನು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕಾರಿಗೆ ಸರ್ಕಾರ ಪರವಾನಿಗೆ ಕೊಟ್ಟಿದೆ. ವಹನ ಓಡಿಸುವುದಕ್ಕೆ ಡಿಎಲ್ ಕೊಟ್ಟಿದೆ. ನಾವು ವಿಧಾನಸೌಧದ ಒಳಗೆ ಹೋಗುವುದನ್ನು ಬಿಡುವುದಿಲ್ಲ ಎನ್ನುವುದನ್ನು ಇವರ್ಯಾರು?. ನಮಗೆ ಒಳಗೆ ಹೋಗುವುದಕ್ಕೆ ಜನರೇ ಪಾಸ್ ನೀಡಿರುವಾಗ, ಇವರು ಯಾರು ನಮ್ಮನ್ನು ಪಾಸ್ ಕೇಳುವುದಕ್ಕೆ?" ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದ ಸಮೀಪ ಪ್ರತಿಭಟನಾ ಮೆರವಣಿಗೆಯ ಮೂಲ ತೆರಳಿದ ಕೈ ನಾಯಕರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ, ತಡೆದಿದ್ದಾರೆ. ಕಾಂಗ್ರೆಸ್ ನಾಯಕರು ಸುವರ್ಣಸೌಧದ ಮುಂದೆ ಪ್ರತಿಭಟನೆಯಲ್ಲಿ ನಿರತರಾಗಿದ್ದು, ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ.