ಕೋಲ್ಕತ್ತಾ, ಡಿ16 (DaijiworldNews/MS): 2024ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಭಾರತೀಯ ಜನತಾ ಪಕ್ಷ ಸೋಲುವುದನ್ನು ನಾನು ನೋಡಲು ಬಯಸುತ್ತೇನೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಚುನಾವಣೆಗೆ ಮುನ್ನ ಅವರು ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ಕೋಲ್ಕತ್ತಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “2021ರ ಪಶ್ಚಿಮ ಬಂಗಾಳ ಚುನಾವಣೆಯ ಸಮಯದಲ್ಲಿ, ಮಾಧ್ಯಮಗಳು ಬಿಜೆಪಿ ಅಧಿಕಾರಕ್ಕೆ ಬರುತ್ತವೆ ಎಂಬಂತೆ ವರ್ತಿಸಿದವು ಇದರಿಂದ ಜನರು ಭಯಭೀತರಾಗಿದ್ದರು, ಆದರೆ ಜನರ ಆದೇಶವು ಅದನ್ನು ಬದಲಾಯಿಸಿತು. ಬಂಗಾಳ ಇಂದು ಏನು ಯೋಚಿಸುತ್ತಿದೆಯೋ, ಭಾರತ ಅದನ್ನು ನಾಳೆ ಯೋಚಿಸುತ್ತದೆ.ನಾವು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಏನಾಯಿತೋ ಅದೇ ಲೋಕಸಭಾ ಚುನಾವಣೆಯಲ್ಲೂ ಆಗಲಿದೆ ಎಂದು ಹೇಳಿದರು.
ನಾವು ಗೋವಾದಲ್ಲಿ ಹೊಸ ಘಟಕ ತೆರೆದಿದ್ದೇವೆ. ತ್ರಿಪುರಾದಲ್ಲೂ ನಾವು ವಿಸ್ತರಿಸಿದ್ದೇವೆ. ತೃಣಮೂಲ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷವು ಬಂಗಾಳದಲ್ಲಿ ಏನೆಲ್ಲಾ ಮಾಡುತ್ತಿದೆ ಎಂಬುದನ್ನು ತೋರಿಸಲು ವಿವಿಧ ರಾಜ್ಯಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದರು.