ಮೈಸೂರು, ಡಿ.15 (DaijiworldNews/HR): ಮೈಸೂರು ಜಿಲ್ಲೆಯ ನಂಜನಗೂಡಿನ ಬಳಿ ಗರ್ಭಿಣಿ ಪತ್ನಿಯನ್ನು ಪತಿಯೋರ್ವ ಕಪಿಲಾ ನದಿಯಲ್ಲಿ ಮುಳುಗಿಸಿ ಹತ್ಯೆಗೈದಿರುವ ಘಟನೆ ಡೆದಿದೆ.
ಸಾಂದರ್ಭಿಕ ಚಿತ್ರ
ಕೊಲೆಯಾದ ಗರ್ಭಿಣಿಯನ್ನು ದೇವಿ(28) ಎಂದು ಗುರುತಿಸಲಾಗಿದ್ದು, ಮುದ್ದನಹಳ್ಳಿ ರಾಜೇಶ್ ಗರ್ಭಣಿ ಪತ್ನಿಯನ್ನೇ ಕೊಂದ ಪತಿ.
ದೇವಿ 5 ತಿಂಗಳ ಗರ್ಭಿಣಿಯಾಗಿದ್ದು, ನಂಜನಗೂಡಿನ ಬಳಿ ಕಪಿಲಾ ನದಿಯಲ್ಲಿ ಪತ್ನಿಯನ್ನು ಮುಳುಗಿಸಿ ಹತ್ಯೆಗೈದಿದ್ದು, ಅಲ್ಲದೇ ತನ್ನ ಮಗುವನ್ನು ಕೂಡ ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಇನ್ನು ಮಗುವನ್ನು ಸ್ಥಳೀಯರು ರಕ್ಷಿಸಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿಯನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.