ಪಶ್ಚಿಮ ಬಂಗಾಳ, ಡಿ.15 (DaijiworldNews/HR): ಪಶ್ಚಿಮ ಬಂಗಾಳದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, 7 ವರ್ಷದ ಬಾಲಕನಲ್ಲಿ ಈ ವೈರಸ್ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪಶ್ಚಿಮ ಬಂಗಾಳ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು,"ಹೊಸ ಒಮಿಕ್ರಾನ್ ಸೋಂಕು 7 ವರ್ಷದ ಬಾಲಕನಲ್ಲಿ ಕಾಣಿಸಿಕೊಂಡಿದೆ. ಆದರೆ ಮಗುವಿನ ಪೋಷಕರನ್ನು ಪರೀಕ್ಷೆಗೊಳಪಡಿಸಿದ್ದು, ನೆಗೆಟಿವ್ ವರದಿ ಬಂದಿದೆ ಎಂದು ತಿಳಿಸಿದೆ.
ಇನ್ನು ದಂಪತಿ ಮತ್ತು ಮಗು ವಿದೇಶದಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಮಗುವಿನಲ್ಲಿ ಸೋಂಕು ಪತ್ತೆಯಾಗಿದ್ದು, ಬಳಿಕ ಅವರು ಪಶ್ಚಿಮಬಂಗಾಳಕ್ಕೆ ತೆರಳಿರುವುದಾಗಿ ವರದಿ ವಿವರಿಸಿದೆ.
ಹೈದರಾಬಾದ್ ನಲ್ಲಿ ಈಗಾಗಲೇ ಎರಡು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಹೈದರಾಬಾದ್ ಗೆ ಆಗಮಿಸಿದ್ದ 24ವರ್ಷದ ಕೀನ್ಯಾ ಯುವತಿ ಮತ್ತು 23 ವರ್ಷದ ಸೋಮಾಲಿಯಾದ ಯುವಕನಲ್ಲಿ ಒಮಿಕ್ರಾನ್ ಪತ್ತೆಯಾಗಿತ್ತು.