ಪಶ್ಚಿಮ ಗೋದಾವರಿ, ಡಿ.15 (DaijiworldNews/HR): ಬಸ್ ಹೊಳೆಗೆ ಬಿದ್ದು ಕನಿಷ್ಠ 9 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ.
ಜಂಗರೆಡ್ಡಿ ಎಂಬಲ್ಲಿ ಸೇತುವೆಯ ಮೇಲೆ ಎಪಿಎಸ್ ಆರ್ಟಿ ಯ ಬಸ್ ಅಪಘಾತವಾಗಿ ಹೊಳೆಗೆ ಬಿದ್ದು ಈ ಅವಘಢ ಸಂಭವಿಸಿದೆ.
ಇನ್ನು ಅವಘಡಕ್ಕೆ ಮೊದಲು ಬಸ್ಸಿನಲ್ಲಿ 26 ಮಂದಿ ಪ್ರಯಾಣಿಕರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಹೆಚ್ಚಿನ ವಿವರ ನೀರಿಕ್ಷಿಸಲಾಗುತ್ತಿದೆ.