ಬೆಂಗಳೂರು, ಡಿ. 14 (DaijiworldNews/HR): ಚಿತ್ರನಟಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ರೋಜಾ, ಟಿಡಿಪಿ ಮುಖಂಡ ಯನಮಾಲಾ ರಾಮಕೃಷ್ಣುಡು ಸೇರಿ 70 ಮಂದಿ ಇದ್ದ ವಿಮಾನ ತಾಂತ್ರಿಕ ಅಡಚಣೆ ಕಾರಣ ಅನಿವಾರ್ಯವಾಗಿ ತಿರುಪತಿಯಲ್ಲಿ ಇಳಿಯಬೇಕಾದ ವಿಮಾನ ಬೆಂಗಳೂರಿಗೆ ಬಂದಿಳಿದಿರುವ ಘಟನೆ ನಡೆದಿದೆ.
ರಾಜಮಂಡ್ರಿಯಿಂದ ತಿರುಪತಿಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ ಎದುರಾಗಿದೆ. ವಿಮಾನ ಸುಮಾರು ಒಂದು ಗಂಟೆ ಕಾಲ ಗಾಳಿಯಲ್ಲಿಯೇ ಸುತ್ತಿದೆ. ನಂತರ ಪೈಲಟ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ.
ಇನ್ನು ಮತ್ತೊಂದೆಡೆ ವಿಮಾನ ಬೆಂಗಳೂರಿನಲ್ಲಿ ಸೇಫ್ ಆಗಿ ಲ್ಯಾಂಡಿಂಗ್ ಆಗಿದ್ದರೂ ಕೂಡ ಅದರ ಬಾಗಿಲು ತೆರೆದುಕೊಳ್ಳದೆ, ಪ್ರಯಾಣಿಕರು ಪರದಾಡುವಂತಾಗಿತ್ತು ಎನ್ನಲಾಗಿದೆ.