ಲಕ್ನೋ, ಡಿ.14 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಭೇಟಿಯನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕೆ ಮಾಡಿದ್ದು, "ಅಂತ್ಯ ಸಮೀಪಿಸಿದಾಗ ಜನರು ಕಾಶಿಯಲ್ಲಿ ಉಳಿಯುತ್ತಾರೆ" ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಒಂದು ತಿಂಗಳ ಅವಧಿಯ ಕಾರ್ಯಕ್ರಮಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ಒಳ್ಳೆಯದು. ಅವರು ಕೇವಲ ಒಂದು ತಿಂಗಳು ಅಲ್ಲ, ಎರಡು ಅಥವಾ ಮೂರು ತಿಂಗಳ ಕಾಲ ಅಲ್ಲಿ ಉಳಿಯಬಹುದು. ಅದು ತಂಗಲು ಸೂಕ್ತವಾದ ಸ್ಥಳ. ಜನರು ಹೆಚ್ಚಾಗಿ ತಮ್ಮ ಜೀವನದ ಕೊನೆಯ ಕಾಲವನ್ನು ಅಲ್ಲಿಯೇ ಕಳೆಯುತ್ತಾರೆ" ಎಂದು ಲೇವಡಿ ಮಾಡಿದ್ದಾರೆ.
"ಕೊನೆಯ ದಿನಗಳನ್ನು ಕಾಶಿ ಅಥವಾ ವಾರಣಾಸಿಯಲ್ಲಿ ಕಳೆಯುವುದು ಮಂಗಳಕರ ಎನ್ನುವುದು ಹಿಂದೂ ನಂಬಿಕೆ" ಎಂದಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದ್ದರು. ಮುಂದಿನ ವರ್ಷದ ಆರಂಭದಿಂದ ಉತ್ತರ ಪ್ರದೇಶ ಚುನಾವಣೆಗೂ ಮೊದಲು ತಮ್ಮ ಕ್ಷೇತ್ರ ವಾರಣಾಸಿಯಲ್ಲಿ ನಡೆಯುತ್ತಿರುವ ಬ್ಲಾಕ್ಬಸ್ಟರ್ ಘಟನೆಗಳ ಸರಣಿಯಲ್ಲಿ ಇತ್ತೀಚಿನ ಕಾಶಿ ವಿಶ್ವನಾಥ್ ಕಾರಿಡಾರ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ಧಾರೆ.