ಮೈಸೂರು, ಡಿ 14 (DaijiworldNews/MS): ಬಿಸಿನೀರು ಮೈ ಮೇಲೆ ಬಿದ್ದ ಪರಿಣಾಮ ಎರಡು ವರ್ಷದ ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕು ದಾಸನಕೊಪ್ಪಲಿನಲ್ಲಿ ನಡೆದಿದೆ.
ದಾಸನಕೊಪ್ಪಲು ನಿವಾಸಿ ಪೋಟೋಗ್ರಾಫರ್ ರಾಮು ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರಿ ಎರಡು ವರ್ಷದ ಆದ್ಯ ಎಂಬ ಮಗು ಮೃತಪಟ್ಟ ದುರ್ದೈವಿ.
ಸ್ನಾನ ಮಾಡಿಸಲು ತಾಯಿ ಜಯಲಕ್ಷ್ಮಿ ಬಿಸಿನೀರು ತಂದಿರಿಸಿ ತಣ್ಣೀರು ತರಲು ಹೋದಾಗ ಬಿಸಿನೀರಿನ ಪಾತ್ರೆಯನ್ನು ಆದ್ಯ ತನ್ನ ಮೈಮೇಲೆ ಎಳೆದುಕೊಂಡಿದೆ. ಮಗುವನ್ನು ತಕ್ಷಣ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.
ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.