ಶ್ರೀನಗರ, ಡಿ. 14 (DaijiworldNews/HR): ಶ್ರೀನಗರದಲ್ಲಿ ಪೊಲೀಸ್ ಸಿಬ್ಬಂದಿಗಳು ತೆರಳುತ್ತಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿರುವ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಹುತಾತ್ಮರಾಗಿದ್ದು, ದಾಳಿಯಲ್ಲಿ ಗಾಯಗೊಂಡಿದ್ದ ಕಾನ್ಸ್ ಟೇಬಲ್ ಒಬ್ಬರು ಇಂದು ಮೃತಪಟ್ಟಿದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಸೋಮವಾರವಾದಂದು ಶ್ರೀನಗರ ಹೊರವಲಯ ಜೆವಾನ್ ಪೊಲೀಸ್ ಕ್ಯಾಂಪ್ ಹತ್ತಿರ ಪೊಲೀಸ್ ವಾಹನದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟು, 14 ಮಂದಿ ಗಾಯಗೊಂಡಿದ್ದರು.
ಇನ್ನು ಇಂದು ಮೃತಪಟ್ಟವರನ್ನು ಜಮ್ಮು-ಕಾಶ್ಮೀರದ ಸಶಸ್ತ್ರ ಪೊಲೀಸ್ ಪಡೆಯ 9ನೇ ಬೆಟಾಲಿಯನ್ ನ ಕಾನ್ಸ್ ಟೇಬಲ್ ರಮೀಜ್ ಅಹ್ಮದ್ ಎಂದು ಗುರುತಿಸಲಾಗಿದೆ.
ಘಟನೆ ನಡೆದಾಕ್ಷಣ ಭದ್ರತಾ ಸಿಬ್ಬಂದಿಗಳು ಅಲರ್ಟ್ ಆಗಿದ್ದು, ಘಟನಾ ಪ್ರದೇಶವನ್ನು ಸುತ್ತುವರೆದಿದ್ದಾರೆ. ಉಗ್ರರರ ಪತ್ತೆ ಕಾರ್ಯ ಮುಂದುವರೆದಿದೆ.