ಬೆಂಗಳೂರು, ಡಿ.14 (DaijiworldNews/PY): "ಪರಿಷತ್ ಚುನಾವಣೆ ಫಲಿತಾಂಶ ಸಮಾಧಾನ ತಂದಿದ್ದು, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಅಭ್ಯರ್ಥಿಗಳು ಚುನಾವಣೆಯಲ್ಲಿ ಪೈಪೋಟಿ ನೀಡಿದ್ದಾರೆ. ಆಡಳಿತರೂಢ ಪಕ್ಷಕ್ಕೆ ಒಂದು ಅಡ್ವಾಂಟೇಜ್ ಇದ್ದು, ಅದನ್ನು, ಅವರು ಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ. ನಾವು ಪರಿಷತ್ನಲ್ಲಿ ಬಹುಮತಕ್ಕಾಗಿ ಹೋರಾಟ ಮಾಡಿಲ್ಲ. ನಾವು ಅದನೆಲ್ಲಾ ಲೆಕ್ಕ ಹಾಕಿಲ್ಲ. ನಾವು ಉತ್ತಮ ಫಲಿತಾಂಶ ನಿರೀಕ್ಷೆ ಮಾಡಿದ್ದು, ನಮಗೆ ಇದು ಸಮಧಾನ ತಂದಿದೆ" ಎಂದು ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇದನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ. ಬಿಜೆಪಿ ಅನಗತ್ಯ ಗೊಂದಲ ಮೂಡಿಸಲು ಹೊರಟಿದೆ. ಬಿಜೆಪಿಯ ಈ ಪ್ರಯತ್ನ ಅವರಿಗೆಲ್ಲಾ ಇಡೀ ರಾಜ್ಯದ ಭವಿಷ್ಯಕ್ಕೆ ಪೆಟ್ಟು ಬೀಳುತ್ತದೆ" ಎಂದಿದ್ದಾರೆ.