ನಾಗ್ಪುರ, ಡಿ. 14 (DaijiworldNews/HR): ಬಾಯ್ ಫ್ರೆಂಡನ್ನು ಮದುವೆಯಾಗುವ ಉದ್ದೇಶದಿಂದ ಯುವತಿಯೊಬ್ಬಳು ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಸುಳ್ಳು ದೂರು ದಾಖಲಿಸಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ನಾಗ್ಪುರ ಪೊಲೀಸ್ ಠಾಣೆಯಲ್ಲಿ ಯುವತಿ ಗ್ಯಾಂಗ್ ರೇಪ್ ದೂರು ದಾಖಲಿಸಿದ್ದು, ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ನಗರದಲ್ಲಿ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಇನ್ನು ನಗರ ಪೊಲೀಸ್ ಕಮೀಷನರ್ ಅವರು ಕೂಡ ತಕ್ಷಣ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಆದೇಶಿಸಿದ್ದು, ಅದರಂತೆ ಸುಮಾರು 1000 ಪೊಲೀಸ್ ಸಿಬ್ಬಂದಿಗಳು ಆರೋಪಿಗಳಿಗಾಗಿ ಹುಡುಕಾಟ ನಡೆಸಿದಾರೆ.
ಜೊತೆಗೆ 250 ಸಿಸಿ ಟಿವಿ ವಿಡಿಯೋಗಳನ್ನು ತರಿಸಿ ಪರಿಶೀಲನೆ ಕೂಡ ಡೆಸಿದ್ದರು. ಆದರೆ ಸ್ಪಲ್ಪ ಕೂಡ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಆಗ ಅನುಮಾನಗೊಂಡ ಪೊಲೀಸರು ದೂರು ನೀಡಿದ ಯುವತಿಯನ್ನು ಕರೆಸಿ ವಿಚಾರನೆ ನಡೆಸಿದಾಗ ಆಕೆ ಸತ್ಯ ಬಾಯಿಬಿಟ್ಟಿದ್ದಾಳೆ ಎಂದು ವರದಿಯಾಗಿದೆ.