ಮಡಿಕೇರಿ, ಡಿ.14 (DaijiworldNews/PY): ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು 105 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕೊಡಗು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಸೋಲು ಕಂಡಿದ್ದಾರೆ.
ಮಂಥರ್ ಗೌಡ ಅವರು ಬಿಜೆಪಿ ನಾಯಕ ಎ ಮಂಜು ಅವರ ಪುತ್ರನಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಎ ಮಂಜು ಅವರು ಬಿಜೆಪಿಯಲ್ಲಿದ್ದುಕೊಂಡೇ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ಪರಿಷತ್ ಚುನಾವಣೆಯಲ್ಲಿ ಪುತ್ರನನ್ನು ಗೆಲ್ಲಿಸಿ ನಂತರ ಮತ್ತೆ ಕಾಂಗ್ರೆಸ್ನತ್ತ ಸರಿಯಲು ಮಂಜು ಯತ್ನಿಸಿದ್ದರು ಎನ್ನಲಾಗಿದೆ. ಆದರೆ, ಇದೀಗ ಮಂಥರ್ ಗೌಡ ಅವರು ಸೋಲನುಭವಿಸಿದ್ದು, ಆರಂಭದಲ್ಲೇ ಮುಖಭಂಗವಾದಂತಾಗಿದೆ.