ಬೆಳಗಾವಿ, ಡಿ 14 (DaijiworldNews/MS): ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆದ ವಿಧಾನಪರಿಷತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಬೆಳಗಾವಿಯಲ್ಲಿ ಮತ ಎಣಿಕೆ ಆರಂಭಗೊಳ್ಳುತ್ತಿದ್ದಂತೆ ಎರಡು ಮತಗಳನ್ನು ಅಸಿಂಧುಗೊಳಿಸಲಾಗಿದೆ.
ಡಿಸೆಂಬರ್ 10ರಂದು ನಡೆದಿದ್ದಂತ ಪರಿಷತ್ ಚುನಾವಣೆಯ ಮತದಾನದ ವೇಳೆ ಮತದಾನ ಮಾಡಿದ್ದಂತ ಇಬ್ಬರು ವ್ಯಕ್ತಿಗಳು, ಗೌಪ್ಯ ಮತದಾನ ಕ್ರಮವನ್ನು ಮೀರಿ, ತಾವು ಮಾಡಿದ್ದಂತ ಮತದಾನದ ಪೋಟೋ ತೆಗೆದಿದ್ದರು. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಚುನಾವಣಾ ಆಯೋಗಕ್ಕೆ ಆ ಪೋಟೋ ತೆಗೆದಿದ್ದಂತ ಎರಡು ಮತಗಳನ್ನು ರಿಜೆಕ್ಟ್ ಮಾಡುವಂತೆ ಮನವಿ ಕೂಡ ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ 2 ಮತ ರಿಜೆಕ್ಟ್ ಮಾಡಲಾಗಿದೆ.
ಮತಎಣಿಕೆ ಆರಂಭಗೊಳ್ಳುತ್ತಿದ್ದಂತೆ ಪೋಟೋ ತೆಗೆದ ವಿಚಾರ ಸಂಬಂಧ ಚುನಾವಣಾ ಆಯೋಗದ ಅಧಿಕಾರಿಗಳು ಬ್ಯಾಲೆಟ್ ಪೇಪರ್ ವಿಂಗಡಿಸೋ ಸಂದರ್ಭದಲ್ಲಿ, ಪೋಟೋ ತೆಗೆದಿದ್ದಂತ ಪ್ರಕರಣ ಸಂಬಂಧ ಅಭ್ಯರ್ಥಿಗಳು ಹಾಗೂ ಏಜೆಂಟರ್ ಸಮ್ಮುಖದಲ್ಲಿ ಅನುಕ್ರಮ ಆಧಾರಿಸಿ ಎರಡು ಮತಗಳನ್ನು ಅಸಿಂಧುಗೊಳಿಸಿದ್ದಾರೆ.