ಬೆಂಗಳೂರು, ಡಿ.13 (DaijiworldNews/SM): ವಿಧಾನ ಪರಿಷತ್ ನ ಇಪ್ಪತ್ತು ಕ್ಷೇತ್ರಗಳ ಇಪ್ಪತ್ತೈದು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಡಿಸೆಂಬರ್ ೧೪ರ ಮಂಗಳವಾರ ಹೊರಬೀಳಲಿದೆ.
ಈಗಾಗಲೇ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ಮತ ಪೆಟ್ಟಿಗೆಗಳನ್ನು ಇರಿಸಿರುವ ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ನಾಳೆ ಫಲಿತಾಂಶ ಪ್ರಕಟಗೊಳ್ಳಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದ್ದು, ಎರಡೂ ಪಕ್ಷಗಳಿಗೆ ಪ್ರತಿಷ್ಟೆಯ ಕಣವಾಗಿದೆ.
ಇನ್ನೊಂದೆಡೆ ಸದ್ಯ ಈ ಹಿಂದೆ ಇದ್ದ ಸ್ಥಾನಗಳನ್ನು ಉಳಿಸಿಕೊಳ್ಳುವುದು ಎರಡೂ ಪಕ್ಷಗಳಿಗೂ ಮುಖ್ಯವಾಗಿದೆ. ಸದ್ಯ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.