ದೆಹಲಿ, ಡಿ.13 (DaijiworldNews/SM): ಓಮಿಕ್ರಾನ್ ಕೊರೊನಾ ವೈರಸ್ ರೂಪಾಂತರದ ಬಗ್ಗೆ ಎಲ್ಲೆಡೆ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಆದರೆ, ಓಮಿಕ್ರಾನ್ ಹರಡುವಿಕೆ ತೀವ್ರವಾಗಿದೆ. ಡೆಲ್ಟಾಗಿಂತಲೂ ಪ್ರಬಲವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.
ಓಮಿಕ್ರಾನ್ ರೂಪಾಂತರ ತೀವ್ರವಾದ ರೋಗಲಕ್ಷಣಗಳನ್ನುಂಟು ಮಾಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮೊದಲು ಗುರುತಿಸಲಾದ ಡೆಲ್ಟಾ ರೂಪಾಂತರವು ಪ್ರಪಂಚದ ಹೆಚ್ಚಿನ ಕೊರೊನಾ ವೈರಸ್ ಸೋಂಕುಗಳಿಗೆ ಕಾರಣವಾಗಿದೆ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರ.