ನವದೆಹಲಿ, ಡಿ.13 (DaijiworldNews/SM): ನೌಕರರ ಭವಿಷ್ಯ ನಿಧಿ ಖಾತೆಗೆ ನಾಮಿನಿಯನ್ನು ಸೇರಿಸಲು ಇಲಾಖೆ ಇದೀಗ ಗಡುವು ನೀಡಿದೆ. ಡಿಸೆಂಬರ್ ತಿಂಗಳ ೩೧ರ ಒಳಗಾಗಿ ಯಾರೆಲ್ಲ ನಾಮಿನಿ ಸೇರಿಸಿಕೊಂಡಿಲ್ಲ ಅವರು ಖಾತೆಗೆ ಸೇರ್ಪಡೆಗೊಳಿಸುವಂತೆ ಸೂಚಿಸಲಾಗಿದೆ.
ಬಹುತೇಕ ಉದ್ಯೋಗಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆ ಖಾತೆಯನ್ನು ಹೊಂದಿದ್ದು, ಈ ಖಾತೆಯಲ್ಲಿ ಉದ್ಯೋಗಿಗಳ ಸಂಬಳದ ಭಾಗವನ್ನು ಪ್ರತಿ ತಿಂಗಳು ಠೇವಣಿ ಮಾಡಲಾಗುತ್ತಿದೆ. ಇದು ಅವರ ಒಟ್ಟಾರೆ ಉಳಿತಾಯ ಮತ್ತು ನಿವೃತ್ತಿ ಯೋಜನೆಗೆ ಕೊಡುಗೆ ನೀಡುವ ಯೋಜನೆಯಾಗಿದೆ.
ಸದ್ಯ ಭವಿಷ್ಯ ನಿಧಿ (PF) ಖಾತೆದಾರರು ತಮ್ಮ ಖಾತೆಗಳಿಗೆ ನಾಮಿನಿಯನ್ನು ಸೇರಿಸುವುದು ಅತ್ಯಗತ್ಯವಾಗಿದೆ. ಒಂದೊಮ್ಮೆ ನಾಮಿನಿ ಸೇರಿಸದೇ ಇದ್ದಲ್ಲಿ ಭವಿಷ್ಯದಲ್ಲಿ ತೊಂದರೆಗಳಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಖಾತೆಗೆ ಸೇರಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಸೇವೆಗಳ ಲಾಭ ಪಡೆಯಲು ಜನರು ತಮ್ಮ ನಾಮಿನಿಯನ್ನು ಸೇರ್ಪಡೆ ಮಾಡುವಂತೆ ಇಪಿಎಫ್ಒ ತಿಳಿಸಿದೆ.