ಬೆಳಗಾವಿ, ಡಿ.13 (DaijiworldNews/SM): ಚಳಿಗಾಲದಾಧಿವೇಶನ ಆರಂಭಗೊಂಡಿದ್ದು, ಲವ್ ಜಿಹಾದ್ ನಿಯಂತ್ರಣಕ್ಕೆ ಸರಕಾರ ಸಿದ್ಧತೆ ನಡೆಸಿಕೊಂಡಿದೆ. ಇಲಾಖೆಯಡಿಯಲ್ಲಿ ಯಾವ ಕಾಯ್ದೆ ಯಾವ ರೀತಿಯಲ್ಲಿ ನಿಭಾಯಿಸಬೇಕೆಂಬುವುದನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯನ್ನು ಸಂಪುಟದಲ್ಲಿ ತಂದು ನಂತರ ಸದನದಲ್ಲಿ ಮಂಡಿಸುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಅದರಂತೆ ಹಲವು ಕಾಯ್ದೆಗಳನ್ನು ಜಾರಿಗೊಳಿಸಲು ಹಾಗೂ ಕೆಲವು ತಿದ್ದುಪಡಿಗೊಳಿಸಲು ಸರಕಾರ ತುದಿಗಾಲಲ್ಲಿ ನಿಂತಂತಿದೆ. ಪರ ವಿರೋಧ ಚರ್ಚೆಗಳ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ಸತ್ಯ ಸಂಗತಿ.
ಸುವರ್ಣ ಸೌಧದ ಹೊರಗೆ ರೈತರು ಪ್ರತಿಭಟನೆ ಮಾಡುತ್ತಿರುವ ಬಗ್ಗೆ, ರೈತರ ಜೊತೆ ಚರ್ಚಿಸುತ್ತೇನೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದೆಂದು ಸಿಎಂ ತಿಳಿಸಿದ್ದಾರೆ.