ಬೆಳಗಾವಿ, ಡಿ. 13 (DaijiworldNews/HR): ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ಈ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾವು ಸದನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಿ, ಜಾರಿಗೆ ತರುತ್ತೇವೆ. ಆದರೆ ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ಈ ಕಾಯ್ದೆಯನ್ನು ವಿರೋಧಿಸುತ್ತಿದೆ" ಎಂದರು.
ಇನ್ನು ಬಲವಂತದ ಮತಾಂತರ ಮತ್ತು ಲವ್ ಜಿಹಾದ್ ಕಾಯಿದೆ ತರುತ್ತೇವೆ. ನಾವು ಇದ್ದಾಗ ಈ ಕಾನೂನು ಮಾಡದಿದ್ರೆ ಹೇಗೆ.? ನಮಗೆ ಬಹುಮತ ಇದೆ ನಾವು ಮಂಡನೆ ಮಾಡ್ತೀವಿ ಎಂದಿದ್ದಾರೆ.
"ಡಿಕೆಶಿ ಮತ್ತು ಸಿದ್ದರಾಮಯ್ಯಗೆ ಈ ಕಾಯಿದೆ ಅಂದ್ರೆ ಭಯ ಯಾಕೆ? ಒಂದು ಸಮುದಾಯವನ್ನ ಓಲೈಕೆ ಅವರು ಈ ರೀತಿಯ ಹೇಳಿಕೆ ಕೊಡ್ತಿದ್ದಾರೆ. ಶಿವಕುಮಾರ್ ನನ್ನ ಜತೆ ಬರಲಿ ಬಲವಂತದ ಮತಾಂತರ ಮಾಡ್ತಿರೋದನ್ನ ತೋರಿಸುತ್ತೇನೆ" ಎಂದು ಹೇಳಿದ್ದಾರೆ.