ಚಂಡೀಗಢ, ಡಿ.13 (DaijiworldNews/PY): "ಮುಂದಿನ ಶೈಕ್ಷಣಿಕ ವರ್ಷದಿಂದ ಹರಿಯಾಣದ ಶಾಲೆಯ ವಿದ್ಯಾರ್ಥಿಗಳು ಶಾಲೆಗಳಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಲಿದ್ದಾರೆ" ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ತಿಳಿಸಿದ್ದಾರೆ.
ಕುರುಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಗೀತಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, "5ನೇ ಹಾಗೂ 6ನೇ ತರಗತಿ ವಿದ್ಯಾರ್ಥಿಗಳಿಗೆ ಭಗವದ್ಗೀಗೆ ಸಂಬಂಧಿಸಿದ ಪುಸ್ತಕಗಳನ್ನು ಕಲಿಸಲಾಗುವುದು" ಎಂದಿದ್ದಾರೆ.
"ಭಗವದ್ಗೀತೆಯ ಸಂದೇಶವನ್ನಯ ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಬೇಕು. ಭಗವದ್ಗೀತೆ ಜೀವನಕ್ಕೊಂದು ದಿಕ್ಕು ನೀಡುತ್ತದೆ. ಜೀವನದಲ್ಲಿ ಒಂದು ಶ್ಲೋಕದ ಸಂದೇಶವನ್ನು ಅಳವಡಿಸಿಕೊಂಡಲ್ಲಿ ಯಶಸ್ಸು ಸಾಧಿಸಬಹುದು" ಎಂದು ಹೇಳಿದ್ದಾರೆ.
"ಮುಂದಿನ ವರ್ಷದಿಂದ ಗೀತೆಯ ಶ್ಲೋಕಗಳನ್ನು ಶಾಲೆಯಲ್ಲಿ ವಿದ್ಯಾರ್ಥಿಗಳು ಪಠಿಸಲಿದ್ದಾರೆ" ಎಂಬ ಮುಖ್ಯಮಂತ್ರಿಯ ಹೇಳಿಕೆಯನ್ನು ಅವರ ಅಧಿಕೃತ ಟ್ವಿಟರ್ನಲ್ಲಿ ಟ್ವೀಟ್ ಮಾಡಲಾಗಿದೆ.