ಬೆಂಗಳೂರು, ಡಿ.13 (DaijiworldNews/PY): "ಇತರ ಯೋಜನೆಯ ಅನುಷ್ಠಾನ ಮಾಡಲು ಕರೋನಾ ನೆಪ ಹೇಳುತ್ತಿದ್ದ ಸರ್ಕಾರ ಈಗ ಪರಿಹಾರ ಕೊಡಲು ನೀತಿ ಸಂಹಿತೆಯ ನೆಪ ಹೇಳುತ್ತಿದೆ. ನೆಪಗಳನ್ನ ಹುಡುಕುವುದೇ ಈ ಸರ್ಕಾರದ ಕೆಲಸ!" ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕೋವಿಡ್ ಮೃತರ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಣೆ ಮಾಡಿ 6 ತಿಂಗಳು ಸಂದಿವೆ, ಪತ್ರಿಕೆಗಳಲ್ಲಿ, ಬಸ್ಗಳಲ್ಲಿ ಜಾಹಿರಾತುಗಳೂ ರಾರಾಜಿಸಿವೆ! ಆದರೆ ವಾಸ್ತವ ಬೇರೆ. ಇತರ ಯೋಜನೆಯ ಅನುಷ್ಠಾನ ಮಾಡಲು ಕರೋನಾ ನೆಪ ಹೇಳುತ್ತಿದ್ದ ಸರ್ಕಾರ ಈಗ ಪರಿಹಾರ ಕೊಡಲು ನೀತಿ ಸಂಹಿತೆಯ ನೆಪ ಹೇಳುತ್ತಿದೆ. ನೆಪಗಳನ್ನ ಹುಡುಕುವುದೇ ಈ ಸರ್ಕಾರದ ಕೆಲಸ!" ಎಂದಿದೆ.
"ಇದು ಕೇವಲ ಘೋಷಣೆ ಮಾತ್ರ. ಕೊರೊನಾ ಮೃತರ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಣೆಯಾಗಿ ಆರು ತಿಂಗಳು ಕಳೆದರೂ ಹಣ ಸಂತ್ರಸ್ತರ ಕೈ ಸೇರಿಲ್ಲ. ಬದ್ಧತೆ ಇಲ್ಲದ ಸರ್ಕಾರಕ್ಕೆ ಜನರೆಡೆಗೆ ಕರುಣೆಯೂ ಇಲ್ಲ" ಎಂದು ಕಿಡಿಕಾರಿದೆ.
"ಶಾಲೆ, ಕಾಲೇಜುಗಳು ಶುರುವಾಗಿ ಅರ್ಧ ವರ್ಷ ಕಳೆದಿದೆ, ಇನ್ನೂ ಸಹ ಪಠ್ಯ ಪುಸ್ತಕ ಪೂರೈಸಲು ಸಾಧ್ಯವಾಗಲಿಲ್ಲ ಈ ಭ್ರಷ್ಟ ಸರ್ಕಾರಕ್ಕೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳಿ' ಎಂಬ ಬಿಟ್ಟಿ ಸಲಹೆ ಅತಿ ನಾಚಿಕೆಗೇಡಿನ ಸಂಗತಿ, ಬಿಜೆಪಿ ಆಡಳಿತದಲ್ಲಿ ಮಕ್ಕಳ ಭವಿಷ್ಯದ ಭರವಸೆ ಇಲ್ಲದಾಗಿದೆ" ಎಂದಿದೆ.
"ಅರ್ಧ ವರ್ಷ ಕಳೆದರೂ ಕಾಲೇಜು ಮಕ್ಕಳಿಕೆ ಪಠ್ಯ ಪುಸಕ ಕೊಡದ ಬೇಜವಾಬ್ದಾರಿ ಬಿಜೆಪಿ ಸರ್ಕಾರ, ಈ ಸಲವೂ ಪಠ್ಯ ಪುಸ್ತಕ ಸಮಸ್ಯೆ. ಮಕ್ಕಳ ಭವಿಷ್ಯವನ್ನು ಕತ್ತಲೆಗೆ ದೂಡಲಿದೆ ಬಿಜೆಪಿ. ಶಿಕ್ಷಣ ಸಚಿವರೇ, ವಿದ್ಯಾ ದೀಕ್ಷೆ ಬದಲು ತ್ರಿಶೂಲ ದೀಕ್ಷೆ ಕೊಡುವ ಹುನ್ನಾರವೇ?" ಎಂದು ಪ್ರಶ್ನಿಸಿದೆ.