ಜಮ್ಮು, ಡಿ.13 (DaijiworldNews/PY): "ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಮಹಿಳಾ ಒಳನುಸುಳುಕೋರರನ್ನು ಬಿಎಸ್ಎಫ್ ಗುಂಡಿಕ್ಕಿ ಹತ್ಯೆಗೈದಿದೆ" ಎಂದು ಸೋಮವಾರ ಅಧಿಕಾರಿಯೋರ್ವರು ಹೇಳಿದ್ದಾರೆ.
"ಆರ್ಎಸ್ ಪುರ ಸೆಕ್ಟರ್ನಲ್ಲಿ ಭಾನುವಾರ ರಾತ್ರಿ ಅಲರ್ಟ್ ಪಡೆಗಳು ಒಳನುಸುಳುಕೋರರನ್ನು ತಟಸ್ಥಗೊಳಿಸಿದವು" ಎಂದು ಗಡಿ ಭದ್ರತಾ ಪಡೆ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಎಸ್ಪಿಎಸ್ ಸಂಧು ತಿಳಿಸಿದ್ದಾರೆ.
"ಅನುಮಾನಾಸ್ಪದ ಚಲನವಲಗಳನ್ನು ಗಮನಿಸಿದ ಬಿಎಸ್ಎಫ್ ಪಡೆಗಳು ಐಬಿ ದಾಟದಂತೆ ಒಳನುಸುಳುಕೋರರಿಗೆ ಎಚ್ಚರಿಕೆ ನೀಡಿದರು. ಆದರೆ, ಒಳನುಸುಳುಕೋರರು ಗಡಿ ಬೇಲಿಗಳತ್ತ ಓಡುತ್ತಲೇ ಇದ್ದರು" ಎಂದಿದ್ದಾರೆ.
"ಇದರಿಂದ ಎಚ್ಚೆತ್ತ ಬಿಎಸ್ಎಫ್ ಪಡೆಗಳು ಐಬಿ ಒಳಗೆ ಬಿಎಸ್ಎಫ್ ಫೆನ್ಸಿಂಗ್ ಬಳಿ ಒಳನುಗ್ಗುವವರನ್ನು ಗುಂಡು ಹಾರಿಸಿ ತಡೆದಿದ್ದು, ಒಳನುಸುಳುಕೋರರ ಯತ್ನವನ್ನು ವಿಫಲಗೊಳಿಸಿವೆ" ಎಂದು ತಿಳಿಸಿದ್ದಾರೆ.