ಭೂಪಾಲ್, ಡಿ.13 (DaijiworldNews/PY): ಇತ್ತೀಚೆಗೆ ಬೆಂಗಳೂರು ಪೊಲೀರು ಹಾಸ್ಯ ನಟರಾದ ಕುನಾಲ್ ಕಮ್ರಾ ಹಾಗೂ ಮುನಾವರ್ ಫಾರೂಕಿ ಅವರ ಕಾರ್ಯಕ್ರಮಕ್ಕರ ತಡೆ ನೀಡಿದ ಬಳಿಕ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಭೋಪಾಲ್ನಲ್ಲಿ ಹಾಸ್ಯ ಕಾರ್ಯಕ್ರಮ ನಡೆಸಲು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಆಹ್ವಾನಿಸಿದ್ದಾರೆ.
ಸಂಘಪರಿವಾರ ಸಂಘಟನೆಗಳ ಪ್ರತಿಭಟನೆಯ ನಡುವೆ ಫಾರೂಕಿಗೆ ಕಳೆದ ತಿಂಗಳು ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನಿರಾಕರಿಸಲಾಗಿತ್ತು.
ಸಂಘಟಕರಿಗೆ ಬೆದರಿಕೆ ಬಂದ ಬಳಿಕ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸ್ಟ್ಯಾಂಡ್ ಅಪ್ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಕುನಾಲ್ ಕಮ್ರಾ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಾನು ಭೋಪಾಲ್ನಲ್ಲಿ ಕುನಾಲ್ ಹಾಗೂ ಮುನಾವರ್ಗಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತೇನೆ. ಎಲ್ಲಾ ಜವಾಬ್ದಾರಿ ನನ್ನದಾಗಿರುತ್ತದೆ. ಕಾಮಿಡಿ ವಿಷಯ ದಿಗ್ವಿಜಯ್ ಸಿಂಗ್ ಆಗಿರಬೇಕು. ಆರ್ಎಸ್ಎಸ್ ಕಾರ್ಯಕರ್ತರನ್ನು ಇದರಲ್ಲಿ ಆಕ್ಷೇಪಿಸಬಾರದು. ಭಯಪಡಬೇಡಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕ ಹಾಗೂ ಸಮಯವನ್ನು ನೀಡಿ. ನಿಮ್ಮ ಎಲ್ಲಾ ಷರತ್ತುಗಳನ್ನು ಸ್ವೀಕರಿಸಲಾಗಿದೆ" ಎಂದಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ರಾಜ್ಯಸಭಾ ಸದಸ್ಯರು, ಕುನಾಲ್ ಕಾಮ್ರಗೆ ಸಂಬಂಧಿಸಿದ ಸುದ್ದಿ ಲೇಖನವನ್ನು ಸಹ ಟ್ಯಾಗ್ ಮಾಡಿದ್ದಾರೆ.